ADVERTISEMENT

ಪರಿಷೆಯಲ್ಲಿ ಪ್ಲಾಸ್ಟಿಕ್ ಕವರ್

ಕೆ.ಸಿ.ರತ್ನಶ್ರೀ ಶ್ರೀಧರ್‌
Published 3 ಡಿಸೆಂಬರ್ 2018, 19:45 IST
Last Updated 3 ಡಿಸೆಂಬರ್ 2018, 19:45 IST

ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಪ್ರತಿವರ್ಷದಂತೆ ಈ ವರ್ಷವೂ ಭಾನುವಾರ ಸಂಜೆ ಹೋಗಿದ್ದೆವು. ಹೊರಗಡೆ ದೊಡ್ಡದಾಗಿ ‘ಪ್ಲಾಸ್ಟಿಕ್ ಕವರ್ ಉಪಯೋಗಿಸುವಂತಿಲ್ಲ’ ಎಂಬ ಬೋರ್ಡ್ ಮತ್ತು ಕೈ ಚೀಲಗಳ ಸಾಕಷ್ಟು ಅಂಗಡಿಗಳನ್ನು ನೋಡಿ, ಮತ್ತಷ್ಟು ಖುಷಿಯಿಂದಲೇ ಜಾತ್ರೆಗೆ ಹೋದೆವು. ಅಲ್ಲಿ ಕಡಲೆಕಾಯಿ ಕೊಂಡುಕೊಳ್ಳುತ್ತಿದ್ದಂತೆ ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಅದರೊಳಗೆ ಕಡಲೆಕಾಯಿ ಹಾಕಲು ಮುಂದಾದ ವ್ಯಾಪಾರಿಯನ್ನು ಮೆಲ್ಲಗೆ ಗದರಿ ನಮ್ಮ ಕೈ ಚೀಲದಲ್ಲಿ ಹಾಕಿಸಿಕೊಂಡು, ‘ಪ್ಲಾಸ್ಟಿಕ್ ಕವರ್ ಬ್ಯಾನಾಗಿದೆ, ಬಳಸಬೇಡಿ’ ಎಂದು ಹೇಳಿ ಮುಂದಕ್ಕೆ ನಡೆದೆವು. ಹಿಂತಿರುಗಿ ನೋಡಿದರೆ, ಮುಂದಿನ ಗಿರಾಕಿಗೂ ಪ್ಲಾಸ್ಟಿಕ್ ಚೀಲದಲ್ಲೇ ಕಡಲೆಕಾಯಿ ಹಾಕಿಕೊಡುತ್ತಿರುವುದು ಕಂಡು ಮತ್ತೊಮ್ಮೆ ಕೂಗಿ ಹೇಳಿದೆವು. ವಿವಿಧ ಬಗೆಯ ತಿಂಡಿ-ತಿನಿಸು, ಆಲಂಕಾರಿಕ ವಸ್ತುಗಳ ಅಂಗಡಿಗಳು, ಸರ-ಬಳೆ ಮುಂತಾದ ಎಲ್ಲಾ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಕವರ್‌ಗಳ ಬಳಕೆ ಕಂಡು ಬೇಸರವಾಯಿತು. ಸಂಬಂಧಪಟ್ಟ ಅಧಿಕಾರಿಗಳು ಸತತವಾಗಿ ತಪಾಸಣೆ ನಡೆಸಿ ದಂಡ ವಿಧಿಸಿದರೆ, ಸ್ವಲ್ಪ ಮಟ್ಟಿಗೆ ಸರಿಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.