ADVERTISEMENT

ನಟನ ಆದರ್ಶ ನಡೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಫೆಬ್ರುವರಿ 2020, 15:48 IST
Last Updated 2 ಫೆಬ್ರುವರಿ 2020, 15:48 IST

ಇಂದು ಆಡಂಬರದ ಜೀವನಶೈಲಿ ಅಳವಡಿಸಿಕೊಂಡಿರುವವರೇ ಹೆಚ್ಚಾಗಿದ್ದಾರೆ. ಅದರಲ್ಲೂ ಸೆಲೆಬ್ರಿಟಿ
ಗಳೆಂದರೆ ಹೇಳತೀರದು; ಎಲ್ಲದರಲ್ಲೂ ವೈಭವ, ದುಂದುವೆಚ್ಚ. ಇವರ ನಡುವೆ ನಟ ಚೇತನ್ ಸರಳವಾಗಿ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವುದು ಆದರ್ಶ ಮತ್ತು ಅನುಕರಣೀಯ ನಡೆ.

ಒಬ್ಬ ನಟನಾಗಿ ಸಾರ್ವಜನಿಕ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲೂ ತಾವು ನಂಬಿದ ಸಿದ್ಧಾಂತಕ್ಕೆ ಅವರು ಬದ್ಧರಾಗಿರುವುದು ಅಭಿನಂದನೀಯ ಮತ್ತು ಅನುಕರಣೀಯ. ಸಂವಿಧಾನದ ಹೊತ್ತಗೆಯನ್ನು ಸಾಕ್ಷಿಯಾಗಿಟ್ಟು ದಾಂಪತ್ಯಕ್ಕೆ ಕಾಲಿರಿಸಿದ ಚೇತನ್‌, ಯುವಜನರಿಗೆ ಮಾದರಿ.

- ರುದ್ರೇಶ್ ಅದರಂಗಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.