ADVERTISEMENT

ಆವೇಶಕ್ಕೆ ಒಳಗಾಗದ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 17:51 IST
Last Updated 4 ಜೂನ್ 2021, 17:51 IST

ಗೂಗಲ್‌ನಲ್ಲಿ ಕನ್ನಡದ ಬಗ್ಗೆ ಆಕ್ಷೇಪಾರ್ಹ ಅಂಶ ಕಂಡುಬಂದರೂ ಆವೇಶಕ್ಕೆ ಒಳಗಾಗದೆ ನ್ಯಾಯಯುತವಾಗಿಯೇ ಗೂಗಲ್‌ನಿಂದ ತೆಗೆದುಹಾಕುವಂತೆ ಮಾಡಿದ್ದಲ್ಲದೆ, ಅದರಿಂದ ಕ್ಷಮಾಪಣೆಯನ್ನೂ ಕೇಳಿಸಿದ ಕನ್ನಡಿಗರು ಅಭಿನಂದನಾರ್ಹರು. ಬೇರೆ ರಾಜ್ಯಗಳಲ್ಲಾದರೆ ಎಷ್ಟೋ ವಾಹನಗಳು ಹೊತ್ತಿ ಉರಿದು, ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿ, ಮುಗ್ಧರ ಸಾವು ನೋವುಗಳಿಗೂ ಸಾಕ್ಷಿಯಾಗಬೇಕಾದ ಸಾಧ್ಯತೆ ಇರುತ್ತಿತ್ತು. ಜಾತಿ, ಧರ್ಮ, ಭಾಷೆ, ನಾಡು, ದೇಶ, ಇತಿಹಾಸ, ನಾಯಕ ಮುಂತಾದ ವಿವಾದಾತ್ಮಕ ಅಂಶಗಳನ್ನು ದೂರವಿರಿಸುವ ಸೋಸುವಿಕೆಯನ್ನು ಅಳವಡಿಸಿಕೊಳ್ಳಲು ಗೂಗಲ್‌ನಂತಹ ಸಂಸ್ಥೆಗೆ ಅಸಾಧ್ಯವಾಗಲಾರದೆಂದು ಭಾವಿಸೋಣವೇ?

-ಭರತ್ ಬಿ.ಎನ್., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT