ADVERTISEMENT

ಕಾಶ್ಮೀರಕ್ಕೂ ಪಶ್ಚಿಮಘಟ್ಟದ ಗತಿ ಬಾರದಿರಲಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 17:41 IST
Last Updated 24 ಅಕ್ಟೋಬರ್ 2019, 17:41 IST

ಪಶ್ಚಿಮಘಟ್ಟದಲ್ಲಿ ಅತಿಯಾದ ಮಾನವ ಹಸ್ತಕ್ಷೇಪದಿಂದ ಕರ್ನಾಟಕ, ಕೇರಳ ಭೂಪ್ರದೇಶದಲ್ಲಿ ಜೋರು ಮಳೆಗೆ ಭೂಕುಸಿತ ಸಂಭವಿಸುತ್ತಿದೆ. ಮುಖ್ಯವಾಗಿ ಅರಣ್ಯನಾಶ, ಗಣಿಗಾರಿಕೆ, ಬೃಹತ್‌ ಕೈಗಾರಿಕೆಗಳು, ರೆಸಾರ್ಟ್‌ಗಳು, ಹೋಮ್‌ಸ್ಟೇಗಳು, ಕಾಫಿ, ಟೀ ಪ್ಲಾಂಟೇಷನ್‍ಗಳು, ಅಡಿಕೆ ತೋಟಗಳು ಮುಂತಾದವುಗಳಿಂದ ಹಿಡಿತ ಕಳೆದುಕೊಂಡ ಬೆಟ್ಟಗುಡ್ಡಗಳು ಎಲ್ಲೆಂದರಲ್ಲಿ ಕುಸಿಯತೊಡಗಿದ್ದು, ಎರಡು ವರ್ಷಗಳಿಂದ ಇದರ ತೀವ್ರ ಅನುಭವ ಆಗುತ್ತಿದೆ.

ಈ ದುರಂತದ ಅನುಭವ ಎದುರಿಗಿದ್ದೂ ಕೇಂದ್ರ ಸರ್ಕಾರ ಅತ್ತ ಕಾಶ್ಮೀರ ಕಣಿವೆಯಲ್ಲೂ ಬೃಹತ್ ಕೈಗಾರಿಕಾ ಕಾಮಗಾರಿಗಳನ್ನು ಆರಂಭಿಸಲು ತುದಿಗಾಲ ಮೇಲೆ ನಿಂತಿದೆ. ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳು ಕಣಿವೆಗೆ ಬಂದು ಬಂಡವಾಳ ಹೂಡಲು ಪ್ರೋತ್ಸಾಹಿಸುತ್ತಿದೆ. ಆದರೆ ಈ ಬಗೆಯ ಅಭಿವೃದ್ಧಿ ಮುಂದೊಂದು ದಿನ ಕಾಶ್ಮೀರ ಕಣಿವೆಗೂ ಪಶ್ಚಿಮಘಟ್ಟದ ಗತಿಯನ್ನೇ ತಾರದಿರಲಾರದು ಎಂದು ಹೇಳಲಾಗದು. ಇದಕ್ಕಿಂತ ಕಾಶ್ಮೀರ ಕಣಿವೆಯನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು
ಸರ್ವೋತ್ತಮ.

- ಪ್ರೊ. ಶಿವರಾಮಯ್ಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.