ADVERTISEMENT

ಅನಾಹುತ ತಪ್ಪಿದ್ದಲ್ಲ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST

ಕೊಡಗಿನ ಕೆಲವು ಗುಡ್ಡಗಳಲ್ಲಿ ಎಸ್ಟೇಟ್ ಮಾಲೀಕರು ನಿರ್ಮಿಸಿರುವ ಕೆರೆಗಳ ಭಾರವೇ ಗುಡ್ಡಗಳ ಕುಸಿತಕ್ಕೆ ಕಾರಣ ಎಂದು ಪರಿಸರವಾದಿಗಳು, ತಜ್ಞರು ಹೇಳಿದ್ದು ವರದಿಯಾಗಿದೆ (ಪ್ರ.ವಾ., ಆ. 28).

‘ಈ ಭೂಮಿಯು ನೀರಿನ ಮೇಲೆ ತೇಲುತ್ತಿದೆ’ ಎಂಬುದು ನಿಜವಾದರೆ, ಪ್ರಕೃತಿಯು ಸಮತೋಲನ ಕಾಪಾಡಲು ಒಂದು ಕಡೆ ಗುಡ್ಡ, ಭಾರವಾದ ಖನಿಜ ಸಂಪತ್ತು ಮತ್ತು ಮರಗಳನ್ನು, ಮತ್ತೊಂದು ಕಡೆ ನೀರನ್ನು, ಇನ್ನೊಂದು ಕಡೆ ಮರಳು... ಹೀಗೆ ಕೆಲವು ಕೊಡುಗೆಗಳನ್ನು ಕೊಟ್ಟಿದೆ. ಆದರೆ ಮನುಷ್ಯನು ಆಸೆಗೆ ಕಡಿವಾಣ ಹಾಕದೆ, ಒಂದು ಕಡೆ ಭಾರ ಹೆಚ್ಚಾಗಿಸುವುದು, ಮತ್ತೊಂದು ಕಡೆ ಕಡಿಮೆ ಮಾಡುವುದು ನಡೆದಿದೆ. ಇದರಿಂದ ಎಂದಾದರೂ ಒಂದು ದಿನ ಅಪಾಯ ತಪ್ಪಿದ್ದಲ್ಲ. ಪರಿಸರ ವಾದಿಗಳು, ತಜ್ಞರು ಈ ಕುರಿತ ಅಪಾಯಗಳನ್ನು ಅಂದಾಜಿಸಿ ಜನರಲ್ಲಿ ಎಚ್ಚರಿಕೆ ಮೂಡಿಸುವುದು ಅಗತ್ಯ.

ಟಿ. ರಾಮಪ್ಪ, ಬೊಮ್ಮೇನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.