ADVERTISEMENT

ಉಡುಗೆಯಿಂದ ಸಂಸ್ಕೃತಿಯ ಉಳಿವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಅಕ್ಟೋಬರ್ 2020, 19:30 IST
Last Updated 9 ಅಕ್ಟೋಬರ್ 2020, 19:30 IST

ಕೊಡವ ಯುವಕನೊಬ್ಬ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿ ಅಮೆರಿಕದಲ್ಲಿ ಸಲಿಂಗ ವಿವಾಹವಾಗಿದ್ದಕ್ಕೆ ಕೊಡವ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವುದನ್ನು ತಿಳಿದು (ಪ್ರ.ವಾ., ಅ. 9) ಬೇಸರವಾಯಿತು. ಇಲ್ಲಿ ಆಕ್ಷೇಪವಿರುವುದು ಸಲಿಂಗಿಗಳು ಅದನ್ನು ಧರಿಸಿದರೆಂಬ ಕಾರಣಕ್ಕೆ. ಅಂದರೆ ಅದು ಸಲಿಂಗಪ್ರೇಮ ಹಾಗೂ ಸಲಿಂಗಿಗಳ ವಿವಾಹಕ್ಕೆ ವ್ಯಕ್ತವಾದ ಆಕ್ಷೇಪವೇ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಕುರಿತು ವಿರೋಧ, ವ್ಯಂಗ್ಯ, ಕುಹಕದ ಟೀಕೆಗಳನ್ನು ನೋಡುತ್ತಿದ್ದರೆ, ಎಂತಹ ಸಮಾಜದಲ್ಲಿ ನಾವಿದ್ದೇವೆ ಎನಿಸುತ್ತದೆ.

ಯಾರು, ಯಾವ ಬಟ್ಟೆ ಧರಿಸುತ್ತಾರೆ ಎಂಬುದರ ಮೇಲೆ ಸಂಸ್ಕೃತಿಯ ಅಳಿವು, ಉಳಿವು ನಿರ್ಧಾರವಾಗುವುದೇ? ಅಷ್ಟಕ್ಕೂ ತಾವು ಏನನ್ನು ಧರಿಸಬೇಕು, ಯಾರನ್ನು ಪ್ರೀತಿಸಬೇಕು, ಮದುವೆಯಾಗಬೇಕು ಎಂಬುದನ್ನೆಲ್ಲ ಸ್ವತಃ ನಿರ್ಧರಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಪ್ರೇಮಿಸುವುದು, ತನಗಿಷ್ಟವಾಗಿದ್ದನ್ನು ಧರಿಸುವುದನ್ನು ಅಕ್ಷಮ್ಯ ಎಂದು ಬಿಂಬಿಸಿ, ಅಂತಹವರನ್ನು ಯಾರೂ ಕ್ಷಮಿಸಬಾರದು ಎಂಬಂತಹ ಮಾತುಗಳನ್ನಾಡುವುದು ಸರಿಯಲ್ಲ.

–ಪ್ರದೀಪ ಟಿ.ಕೆ., ತಿಮ್ಮೇಗೌಡನದೊಡ್ಡಿ, ಕನಕಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.