ADVERTISEMENT

ಊಟದ ಮಹತ್ವ ಅರಿಯದವರು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST

ಲಾಕ್‌ಡೌನ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಕೊಳೆಗೇರಿವಾಸಿಗಳು ಹಸಿವಿನಿಂದ ನರಳಬಾರದೆಂಬ ಕಳಕಳಿಯಿಂದ ಅನೇಕ ಸಂಘ ಸಂಸ್ಥೆಗಳು, ಸಾರ್ವಜನಿಕರು ಮುಂದೆ ಬಂದು ಆಹಾರದ ಪೊಟ್ಟಣಗಳನ್ನು ಉಚಿತವಾಗಿ ಹಂಚುತ್ತಿರುವುದು ಶ್ಲಾಘನೀಯ. ಆದರೆ, ಹೀಗೆ ಹಂಚುತ್ತಿರುವ ಪೊಟ್ಟಣಗಳನ್ನು ಕೆಲವರು ಅವಶ್ಯಕತೆಗಿಂತ ಹೆಚ್ಚಾಗಿ ಪಡೆದು, ಬೇಕಾದುದನ್ನು ತಿಂದು, ಉಳಿದುದನ್ನು ಮೋರಿಗೆ ಬಿಸಾಡುತ್ತಿರುವ ದೃಶ್ಯವನ್ನು ಟಿ.ವಿ. ವಾಹಿನಿಗಳಲ್ಲಿ ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಇಡೀ ದೇಶವೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಈ ಸಂದರ್ಭದಲ್ಲಿ, ಉಚಿತವಾಗಿ ದೊರೆಯುವ ಆಹಾರದ ಮಹತ್ವವನ್ನು ತಿಳಿಯದ ಜನರಲ್ಲಿ ಅರಿವು ಮೂಡುವುದು ಯಾವಾಗ?

-ಶೈಲಾವತಿ ದೇವಿ ಎಸ್., ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT