ADVERTISEMENT

ಗಂಭೀರವಾಗಿ ಪರಿಗಣಿಸಿ ಸೋಮಿ...

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 19:30 IST
Last Updated 7 ಜುಲೈ 2021, 19:30 IST

‘ಹಳ್ಳಿ ಆಸ್ಪತ್ರೆಗಳು ಹಾಸಿಗೆ ಹಿಡಿದಿವೆ ಸೋಮಿ...!’ ಎಂಬ ಲೇಖನ (ಪ್ರ.ವಾ., ಜುಲೈ 7) ಸಮಯೋಚಿತವಾಗಿದೆ. ಕೊರೊನಾ ಸಾಂಕ್ರಾಮಿಕವು ಭಾರತದಲ್ಲಿನ, ವಿಶೇಷವಾಗಿ ಕರ್ನಾಟಕದಲ್ಲಿನ ಆರೋಗ್ಯ ಕೇಂದ್ರಗಳ ಸ್ಥಿತಿಗತಿಗೆ ಕನ್ನಡಿ ಹಿಡಿದಿದೆ. ಆರೋಗ್ಯ ವ್ಯವಸ್ಥೆಯ ವಿಷಯದಲ್ಲಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ, ಚೀನಾ ಪ್ರತೀ 10,000 ರೋಗಿಗಳಿಗೆ ಕನಿಷ್ಠ 43.1ರಷ್ಟು ಹಾಸಿಗೆಗಳನ್ನು ಹೊಂದಿದ್ದರೆ, ಭಾರತವು ಕೇವಲ 5.3ರಷ್ಟು ಹಾಸಿಗೆಗಳನ್ನು ಹೊಂದಿದೆ. ಇದು ಚಿಂತಿಸಬೇಕಾದ ವಿಷಯ. ಭಾರತವು ಜಾಗತಿಕ ಶಕ್ತಿಯಾಗಿ ತನ್ನನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ರಾಷ್ಟ್ರವಾಗಿದೆ.

ಈ ಕನಸನ್ನು ಸಾಕಾರಗೊಳಿಸಲು ಆರೋಗ್ಯ ವ್ಯವಸ್ಥೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡುವುದು ಮತ್ತು ಪ್ರಾಥಮಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಮಾಡಬೇಕಾದುದು ಅತ್ಯಗತ್ಯ. ಲೇಖಕರು ನೀಡಿರುವ ಗರ್ಭಿಣಿಯೊಬ್ಬರ ಉದಾಹರಣೆಯು ಸರ್ಕಾರವು ಆರೋಗ್ಯ ವ್ಯವಸ್ಥೆಗೆ ನೀಡಿದ ಪ್ರಾಮುಖ್ಯತೆಯ ಬಗೆಗೆ ಬೆಳಕು ಚೆಲ್ಲುತ್ತದೆ.

ADVERTISEMENT

–ರಮೇಶ್ ಪುಟ್ಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.