ADVERTISEMENT

ಭಾಷಾ ಶಿಕ್ಷಕನ ಅಳಲು

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
Published 7 ಏಪ್ರಿಲ್ 2019, 20:31 IST
Last Updated 7 ಏಪ್ರಿಲ್ 2019, 20:31 IST

ನಾನೊಬ್ಬ ಕನ್ನಡ ಭಾಷಾ ಶಿಕ್ಷಕ ಹುದ್ದೆಯ ಆಕಾಂಕ್ಷಿ. ಹಾಗಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುವ ‘ಉದ್ಯೋಗ ಅವಕಾಶ’ಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಭಾಷೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಇಂಗ್ಲಿಷ್ ಮತ್ತು ಹಿಂದಿ ಶಿಕ್ಷಕರಿಗೆ ಬೇಡಿಕೆ ಇದೆ. ಆದರೆ ಕನ್ನಡ ಶಿಕ್ಷಕರಿಗೆ ಬೇಡಿಕೆ ಕಡಿಮೆಯಿದೆ.

ನನಗೆ ತಿಳಿದ ಮಟ್ಟಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡು, ಕೇವಲ ಪರೀಕ್ಷಾ ದೃಷ್ಟಿಯಿಂದ ಓದುತ್ತಾರೆ. ಇವರು ಕನ್ನಡವನ್ನು ಗಂಭೀರವಾಗಿ ಓದುವವರಲ್ಲ. ಹಾಗಾಗಿ ಕನ್ನಡ ಭಾಷಾ ಬೋಧನೆಗೆ ಪ್ರತ್ಯೇಕವಾಗಿ ಶಿಕ್ಷಕರ ಅಗತ್ಯವಿಲ್ಲವೆಂದು ಭಾವಿಸುವ ಶಿಕ್ಷಣ ಸಂಸ್ಥೆಯ ಮಾಲೀಕರು, ಇರುವ ಶಿಕ್ಷಕರಲ್ಲೇ ಯಾರೋ ಒಬ್ಬರು ಕನ್ನಡವನ್ನು ಹೇಳಿಕೊಡುವ ವ್ಯವಸ್ಥೆ ಮಾಡಿಬಿಡುತ್ತಾರೆ. ಹಾಗಾಗಿ, ಹಲವೆಡೆ ಪ್ರತ್ಯೇಕ ಕನ್ನಡ ಶಿಕ್ಷಕರ ನೇಮಕದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲಿಯವರೆಗೆ ಸರ್ಕಾರ ಕನ್ನಡವನ್ನು ಪ್ರಥಮ ಭಾಷೆಯಾಗಿ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರುವುದಿಲ್ಲವೋ, ಅಲ್ಲಿಯವರೆಗೆ ಕನ್ನಡದ ಬಗೆಗಿನ ಈ ಉದಾಸೀನ ಭಾವನೆಯೂ ಹೋಗುವುದಿಲ್ಲ, ಕನ್ನಡ ಭಾಷೆಯೂ ಉದ್ಧಾರವಾಗುವುದಿಲ್ಲ, ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ ಸಹ ಈಡೇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT