ADVERTISEMENT

ಕಟ್ಟಡ ಕಾಮಗಾರಿಗೆ ಬೇಕೊಂದು ಕಾನೂನು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 19:45 IST
Last Updated 6 ಡಿಸೆಂಬರ್ 2021, 19:45 IST

ಮನೆ ಕಟ್ಟುವುದು ಮಾನವ ಜನಾಂಗದ ಸಹಜ ಕ್ರಿಯೆ. ಆದರೆ ತಮ್ಮ ನೆಮ್ಮದಿಗಾಗಿ ಕಟ್ಟಿಕೊಳ್ಳುವ ಮನೆಯ ಕೆಲಸ ಇತರರ ನೆಮ್ಮದಿಗೆ ‌ಭಂಗ ಉಂಟಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಇತ್ತೀಚೆಗೆ ವೈಭವೋಪೇತ ಜೀವನಕ್ಕಾಗಿ ಕಟ್ಟುವ ಮನೆಗೆ ನಲವತ್ತೆಂಟು ಸಿಂಗಾರ ಮಾಡುವ ಭರದಲ್ಲಿ ಅತ್ಯಧಿಕ ಶಬ್ದಮಾಲಿನ್ಯ ಉಂಟು‌ ಮಾಡಲಾಗುತ್ತಿದೆ. ಕಬ್ಬಿಣ, ಟೈಲ್ಸ್, ಮಾರ್ಬಲ್ಸ್, ಗ್ರಾನೈಟ್ಸ್ ಕತ್ತರಿಸುವ ಸಮಯಗಳಲ್ಲಂತೂ ಮಾಡುವ ಶಬ್ದವು‌ ಸಹಿಸಲು‌ ಅಸಾಧ್ಯವಾಗುತ್ತದೆ. ನೆರೆಯಲ್ಲಿ ವಯಸ್ಸಾದವರು, ರೋಗಿಗಳು, ಮಕ್ಕಳು ಇದ್ದರೆ ಕಾಮಗಾರಿ ಮುಗಿಯುವವರೆಗೆ ಅವರ ಜೀವನ ಯಾತನಾದಾಯಕವಾಗುತ್ತದೆ. ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರು ತುಂಡು‌ ಗುತ್ತಿಗೆ ಕೆಲಸ ನಿರ್ವಹಿಸುವ ಕಾರಣ, ಮುಂಜಾನೆಯಿಂದ ತಡರಾತ್ರಿಯವರೆಗೂ ಕೆಲಸ ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ ಜಗಳಗಳೂ ಉಂಟಾಗುತ್ತವೆ.

ಹಾಗಾಗಿ ಇದನ್ನು ತಪ್ಪಿಸಲು ಸೂಕ್ತ ನಿಯಮ ಮಾಡುವ ತುರ್ತು ಅವಶ್ಯಕತೆ ಇದೆ. ಕಬ್ಬಿಣದ ಕೆಲಸಗಳನ್ನು ಕೈಗಾರಿಕಾ ವಲಯಗಳಲ್ಲಿ ಮಾಡಿಕೊಂಡು ಬಂದಲ್ಲಿ ಶಬ್ದಮಾಲಿನ್ಯ ಬಹುತೇಕ ತಗ್ಗುತ್ತದೆ. ಹಾಗೆಯೇ ಗುತ್ತಿಗೆದಾರರು ಗೃಹೋಪಯೋಗಿ ವಿದ್ಯುತ್ ದರದಲ್ಲಿ ವಾಣಿಜ್ಯ ದರದ ವಿದ್ಯುತ್‌ ಬಳಕೆ ಮಾಡಿಕೊಳ್ಳುವುದನ್ನೂ ತಪ್ಪಿಸಬಹುದು. ಅಮೃತಶಿಲೆಗಳನ್ನು ಸಹ ಅಳತೆಗೆ ತಕ್ಕಂತೆ‌ ಕೈಗಾರಿಕಾ ಪ್ರದೇಶದಲ್ಲೇ ಸಿದ್ಧ ಮಾಡಿಕೊಂಡು ಬಂದು ಅಳವಡಿಸುವಂತೆ ಆಗಬೇಕು. ಈ ಕುರಿತು ಸಾರ್ವಜನಿಕರು ಮತ್ತು ಪರಿಣತರ ಅಭಿಪ್ರಾಯ ಪಡೆದು ಒಂದು ಮಾರ್ಗಸೂಚಿ ಹೊರಡಿಸಿ, ನಂತರ ಅದಕ್ಕೆ ಕಾನೂನಿನ ರೂಪ ನೀಡಿದರೆ ಒಳಿತು. ಇಲ್ಲವಾದಲ್ಲಿ ವಾಸಕ್ಕೆ ಬರುವ ಮುನ್ನವೇ ನೆರೆಯವರು ಹೊರೆಯೆಂದೆನಿಸುವರು.

- ಎಸ್.ರವಿ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.