ADVERTISEMENT

ಹಕ್ಕಿ-ಪಕ್ಷಿಗಳಿಗೆ ನೆರವಾಗೋಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 19:31 IST
Last Updated 7 ಏಪ್ರಿಲ್ 2021, 19:31 IST

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಝಳಕ್ಕೆ ಭೂಮಿ ಕಾದ ಕಾವಲಿಯಂತಾಗಿದೆ. ಹಕ್ಕಿ-ಪಕ್ಷಿಗಳಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಬೆಳ್ಳಂಬೆಳಿಗ್ಗೆಯೇ ಬಿಸಿಲಿನ ಝಳ ಹೆಚ್ಚಾಗುತ್ತಿರುವ ಕಾರಣ ಹಕ್ಕಿಗಳು ಹಾರಾಟ ಕಡಿಮೆ ಮಾಡಿವೆ. ಅವುಗಳನ್ನು ರಕ್ಷಿಸುವ ಹೊಣೆ ಮನುಷ್ಯರಾದ ನಮ್ಮ ಮೇಲಿದೆ.

ನಮ್ಮ ಮನೆಗಳ ಬಳಿ ಒಂದು ಪಾತ್ರೆಯಲ್ಲೋ ಮಡಕೆಯಲ್ಲೋ ನೀರಿಟ್ಟರೆ ಅವು ಕುಡಿದು ದಾಹ ತೀರಿಸಿಕೊಳ್ಳುತ್ತವೆ. ಕಾಂಕ್ರೀಟ್‌ ಕಾಡಿನಲ್ಲಿ ಅವುಗಳಿಗೆ ಈಗ ನೆಲೆ ಇಲ್ಲ. ಒಂದೆರಡು ವರ್ಷಗಳ ಹಿಂದೆ ಹದ್ದುಗಳು ಬೆಂಗಳೂರಿನಲ್ಲಿ ಹೆಚ್ಚಾಗಿ ಕಾಣುತ್ತಿದ್ದವು. ಆದರೆ ಈಗ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪಾರಿವಾಳ, ಗುಬ್ಬಚ್ಚಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಉಳಿದಿರುವ ಪಕ್ಷಿ ಸಂಕುಲವನ್ನಾದರೂ ರಕ್ಷಿಸೋಣ, ಮಾನವೀಯತೆ ಮೆರೆಯೋಣ.

–ಸೋಮನಗೌಡ ಎಸ್‌.ಎಂ., ಕಟ್ಟಿಗೆಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.