ADVERTISEMENT

ಕನ್ನಡಿಗರು ಮಾಯ!

ಗಣೇಶ್ ಭಟ್ ನೆಲಮಾವ್
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ನಮ್ಮ ಕರ್ನಾಟಕದ ರಾಯಭಾರಿ ಎಂದು ನಾವೆಲ್ಲ ಹೆಮ್ಮೆಪಡುವ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಇತ್ತೀಚೆಗೆ ಕನ್ನಡಿಗರು ಮಾಯವಾಗುತ್ತಿರುವುದು ಕಂಡುಬರುತ್ತಿದೆ. ನಮ್ಮ ಕಡೂರು ಶಾಖೆಯಲ್ಲಿ ತಮಿಳುನಾಡು ಮೂಲದವರು ಶಾಖಾಧಿಕಾರಿಗಳಾಗಿದ್ದು, ಅಕೌಂಟೆಂಟ್, ಫೀಲ್ಡ್ ಆಫೀಸರ್‌ರವರೂ ಸಹ ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಇವರುಗಳಿಗೆ ಸ್ವಾಭಾವಿಕವಾಗಿ ಕನ್ನಡ ಭಾಷೆ ಬರುವುದಿಲ್ಲ. ಇದರಲ್ಲಿ ಅವರುಗಳ ತಪ್ಪು ಏನಿಲ್ಲದಿದ್ದರೂ, ಗ್ರಾಹಕರಿಗೆ ಮಾತ್ರ ತುಂಬ ತೊಂದರೆಯಾಗುತ್ತಿದೆ.

ಯಾವೊಬ್ಬ ಗ್ರಾಹಕರಿಗೂ, ಎಸ್.ಬಿ.ಎಂ. ಶಾಖೆಯಲ್ಲಿ ವ್ಯವಹರಿಸುವುದು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಗ್ರಾಹಕರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಆಡಳಿತ ವರ್ಗ ಇದರ ಬಗ್ಗೆ ಗಮನಹರಿಸಿ, ಶಾಖಾಧಿಕಾರಿಗಳನ್ನು ನೇಮಿಸುವಾಗ ಅವರಿಗೆ ಕಡ್ಡಾಯವಾಗಿ ಕನ್ನಡ ಬರಬೇಕು ಅಥವಾ ಅವರು ಕನ್ನಡದವರೇ ಆಗಬೇಕು ಎಂಬುದರ ಕಡೆಗೆ ಚಿಂತನೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.