ADVERTISEMENT

ವಾಚಕರ ವಾಣಿ| ಜೈವಿಕ ಇಂಧನದಿಂದ ನದಿ ಮಾಲಿನ್ಯಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:30 IST
Last Updated 29 ಡಿಸೆಂಬರ್ 2021, 19:30 IST

ದೇಶದ ಹಲವು ನದಿಗಳು ಮಲಿನವಾಗಲು ಒಳಚರಂಡಿ ಮತ್ತು ಕೈಗಾರಿಕೆ ತ್ಯಾಜ್ಯ ಕಾರಣ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ. ಗಂಗಾ ನದಿ ಮಾಲಿನ್ಯ ಹೋಗಲಾಡಿಸಲು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ಉದ್ದೇಶ ಫಲಿಸಿಲ್ಲ. ಒಳಚರಂಡಿ ವ್ಯವಸ್ಥೆಯಿಲ್ಲದೆ ಕೋಟ್ಯಂತರ ಜನರ ಮಲ ಮೂತ್ರದಿಂದ ಗಂಗಾ ನದಿ ಮಲಿನವಾಗಿ, ಅದೇ ನೀರನ್ನು ಜನರು ಬಳಕೆ ಮಾಡುತ್ತಿರುವುದು ಶೋಚನೀಯ.

ದೇಶದ ಸಾವಿರಾರು ಬುದ್ಧಿಜೀವಿಗಳು, ವಿಜ್ಞಾನಿಗಳಿಗೆ ನದಿ ಮಾಲಿನ್ಯಕ್ಕೆ ಪರಿಹಾರ ತಿಳಿದಿಲ್ಲವೇ? ಒಳಚರಂಡಿಗೆ ಪರ್ಯಾಯ ಸಂಶೋಧನೆ ಮಾಡಿಲ್ಲವೇ? ದೇಶದ ಉಚಿತ ಜಲಮೂಲಗಳನ್ನು ಮಲಿನಗೊಳಿಸಿ ನೀರಿಗೆ ಹಾಹಾಕಾರ ಸೃಷ್ಟಿಸಿ ಹಣ ಲೂಟಿ ಮಾಡುವ ಹುನ್ನಾರವೇ? ಮಹಾತ್ಮ ಗಾಂಧಿಯವರ ಸಲಹೆಯಂತೆ, ಮನೆಗೆ ಎರಡು ಇಂಗುಗುಂಡಿ ವ್ಯವಸ್ಥೆ ಮಾಡಿ, ಮಲಮೂತ್ರ ಮತ್ತು ತ್ಯಾಜ್ಯವನ್ನು ಜೈವಿಕ ಅನಿಲ ಯಂತ್ರಕ್ಕೆ ಸೇರಿಸುವ ಮೂಲಕ ಅತ್ಯಮೂಲ್ಯ ಸಾವಯವ ಗೊಬ್ಬರ ಪಡೆಯಬಹುದು. ದೇಶದ ನದಿ ಮಾಲಿನ್ಯ ತಡೆಯಲು ಇದೇ ಉತ್ತಮ ಮಾರ್ಗವಾಗಿದೆ.

- ಡಾ. ಎಚ್.ಆರ್.ಪ್ರಕಾಶ್,ಕೆ.ಬಿ.ದೊಡ್ಡಿ, ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.