ADVERTISEMENT

ವಾಚಕರ ವಾಣಿ| ಪಟಾಕಿಗೆ ನಿಷೇಧ: ಇತರ ರಾಜ್ಯಗಳಲ್ಲೂ ಜಾರಿಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಸೆಪ್ಟೆಂಬರ್ 2022, 19:31 IST
Last Updated 8 ಸೆಪ್ಟೆಂಬರ್ 2022, 19:31 IST

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 2023ರ ಜನವರಿ 1ರವರೆಗೆ ಪಟಾಕಿಗಳ ಉತ್ಪಾದನೆ, ದಾಸ್ತಾನು
ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವ ವರದಿ (ಪ್ರ.ವಾ., ಸೆ. 8) ಓದಿ ಸಂತಸವಾಯಿತು.
ಈ ನಿರ್ಧಾರದಿಂದ ಜನರ ಜೀವವನ್ನು ಕಾಪಾಡಬಹುದೆಂದು ಅಲ್ಲಿನ ಪರಿಸರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಇದು ಅಕ್ಷರಶಃ ಸತ್ಯ ಹಾಗೂ ಅವರ ಈ‌ ನಿರ್ಧಾರವನ್ನು ಇತರ ಎಲ್ಲಾ ರಾಜ್ಯಗಳು ಚಾಚೂ ತಪ್ಪದೆ
ಅನುಸರಿಸಿದಲ್ಲಿ‌ ದೇಶದಲ್ಲಿನ ವಾಯುಮಾಲಿನ್ಯದ ಪ್ರಮಾಣದಲ್ಲಿ ಬಹಳಷ್ಟನ್ನು ಕಡಿಮೆ ಮಾಡಬಹುದಾಗಿದೆ. ಪಟಾಕಿಗಳ ಸಿಡಿಯುವಿಕೆ ಕೆಲವರಿಗೆ ಆನಂದವನ್ನು ಉಂಟುಮಾಡಬಹುದು. ವೃದ್ಧರಿಗೆ, ನವಜಾತ ಶಿಶು ಹಾಗೂ ಬಾಣಂತಿಯರಿಗೆ, ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರಿಗೆ ಹಾಗೂ ನಮಗಿಂತಲೂ ಹತ್ತಾರು ಪಟ್ಟು ಹೆಚ್ಚಿನ ಶ್ರವಣಸಾಮರ್ಥ್ಯವಿರುವ ಪ್ರಾಣಿ-ಪಕ್ಷಿಗಳಿಗೆ ಆಗುವ ನೋವು, ಕಿರಿಕಿರಿಗೆ ಯಾರು ಜವಾಬ್ದಾರಿ?

ಜನಸಾಮಾನ್ಯರಾದ ನಾವು ಮಾಲಿನ್ಯರಹಿತ ಚಟುವಟಿಕೆ- ಆಚರಣೆಗಳನ್ನು ಕೈಗೊಳ್ಳುವ ಗೋಜಿಗೇ
ಹೋಗದೆ ಮಾಲಿನ್ಯದ ಮಹಾಸಾಲಕ್ಕೆ ತಲಾ ಇನ್ನಷ್ಟು ಮತ್ತಷ್ಟು ಸಾಲವನ್ನು ಸೇರಿಸಿ ಏರಿಸಿಕೊಂಡು ಹೋಗುತ್ತಿದ್ದೇವೆ. ಪ್ರಕೃತಿಯು ಸುಮ್ಮನಿರದೇ ನಿಧಾನವಾಗಿ ಸಾಲ ವಸೂಲಾತಿಗೆ ಇಳಿಯುತ್ತಿದೆ. ಹಲವು ಸಂಘಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದರೂ ಜನ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಆದ್ದರಿಂದ ನಮ್ಮ ಸ್ವೇಚ್ಛೆಗೆ ಕಡಿವಾಣ ಹಾಕಲು ದೆಹಲಿಯ ಪರಿಸರ ಸಚಿವರು ತೆಗೆದುಕೊಂಡ ನಿರ್ಧಾರವನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕಿದೆ. ಕಾರ್ಮಿಕರಿಗೆ ಸೂಕ್ತ ಪರಿಹಾರೋಪಾಯ ಒದಗಿಸುವುದನ್ನು ವ್ಯವಸ್ಥೆ ಮರೆಯಬಾರದು.

ADVERTISEMENT

– ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.