ADVERTISEMENT

ವಾಚಕರ ವಾಣಿ| ನಿರೀಕ್ಷೆ ತರ್ಕಬದ್ಧವಾಗಿರಲಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:30 IST
Last Updated 25 ಜನವರಿ 2023, 19:30 IST

ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿರುವ 80,000 ಭಾರತೀಯರಲ್ಲಿ ಹೆಚ್ಚಿನವರು ನರೇಂದ್ರ ಮೋದಿ ಅವರ ಅಭಿಮಾನಿಗಳಾಗಿದ್ದು, ಅವರಿಗೆ ಭಾರತದಲ್ಲಿ ಕೆಲಸದ ಅವಕಾಶಗಳನ್ನು ಒದಗಿಸಬೇಕೆಂದು ಚಿತ್ರನಿರ್ಮಾಪಕಿ ಸಂಘಮಿತ್ರ ಅವರು ನಿರೀಕ್ಷಿಸಿದ್ದಾರೆ (ಟ್ವೀಟ್‌, ಪ್ರ.ವಾ., ಜ. 25). ಈ ತರ್ಕವು ಎಷ್ಟು ಸಮಂಜಸ? ವಿದ್ಯೆ ಕಲಿತ ದೇಶವನ್ನು, ಹೆತ್ತವರನ್ನು ಬಿಟ್ಟು, ಡಾಲರ್ ಮೋಹಕ್ಕೆ ಒಳಗಾಗಿ ಅಮೆರಿಕದಲ್ಲಿ ನೆಲೆಯೂರಿರುವ, ಆ ದೇಶದ ಉನ್ನತಿಗಾಗಿ ಶ್ರಮಿಸುತ್ತಿರುವವರು ಅವರು.

ಅವರು ಸ್ವದೇಶದಲ್ಲೇ ಉಳಿದು ಭಾರತವನ್ನು ಮುಂಚೂಣಿ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಬಹುದಿತ್ತು. ಈಗ ಕೆಲಸ ಕಳೆದುಕೊಂಡ ಮೇಲೆ, ಮೋದಿ ಅವರ ಅಭಿಮಾನಿಗಳು ಅನ್ನುವ ಕಾರಣಕ್ಕೆ ಅವರಿಗೆಲ್ಲಾ ನಮ್ಮ ದೇಶದಲ್ಲಿ ಉದ್ಯೋಗ ಅವಕಾಶವನ್ನು ಕಲ್ಪಿಸುವುದು ಮುಖ್ಯವೋ ಅಥವಾ ನಮ್ಮ ದೇಶದಲ್ಲಿಯೇ ಇರುವ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಸಮಂಜಸವೋ? ಈ ಬಗ್ಗೆ ಸಂಘಮಿತ್ರ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು.

– ಚೇತನ ಕೊಟ್ಟೂರ್, ಹುಬ್ಬಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.