ಮಂಡ್ಯ ಜಿಲ್ಲೆಗೆ ‘ಸಕ್ಕರೆ ಜಿಲ್ಲೆ’ ಎಂದು ಹೆಸರು ತಂದುಕೊಟ್ಟದ್ದು ಮೈಷುಗರ್ ಕಾರ್ಖಾನೆ. ಆದರೆ ಈಗ ಈ ಕಾರ್ಖಾನೆ ಅವನತಿಯ ಅಂಚಿನತ್ತ ಸಾಗುತ್ತಿದೆ. ಇದಕ್ಕೆ ಕಾರಣಗಳನ್ನು ಶೋಧಿಸಿ, ವೈಜ್ಞಾನಿಕವಾಗಿ ಪರಿಹಾರ ಕ್ರಮಗಳನ್ನು ರೂಪಿಸಬೇಕಿದೆ.
ಕಳೆದ ಎರಡು ಅವಧಿಗಳ ಸರ್ಕಾರಗಳು ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿವೆ. ಈಗಲಾದರೂ ರಾಜಕೀಯ ಧುರೀಣರು ಪರಸ್ಪರ ಕೆಸರೆರಚಾಟ ಬಿಟ್ಟು, ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು. ಈ ಮೂಲಕ ಮೈಷುಗರ್ ಕಾರ್ಖಾನೆಯನ್ನು ಉಳಿಸಿ, ಜಿಲ್ಲೆಯ ರೈತರ ಹಿತ ಕಾಪಾಡಬೇಕು.
– ರಾಮಚಂದ್ರ,ಶ್ರೀ ಕ್ಷೇತ್ರ ಆದಿಚುಂಚನಗಿರಿ, ನಾಗಮಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.