ADVERTISEMENT

ವಾಚಕರ ವಾಣಿ| ಅರಿಯಬೇಕಿದೆ ಸೀಟ್‌ ಬೆಲ್ಟ್‌ ಮಹತ್ವ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಸೆಪ್ಟೆಂಬರ್ 2022, 19:31 IST
Last Updated 7 ಸೆಪ್ಟೆಂಬರ್ 2022, 19:31 IST

ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ರಸ್ತೆ ಅಪಘಾತವು ಸೀಟ್ ಬೆಲ್ಟ್ ಮಹತ್ವದ ಬಗ್ಗೆ ಬೆಳಕು ಚೆಲ್ಲಿದೆ. ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ, ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವರು ಹೇಳಿದ್ದಾರೆ. ಜನರ ಸುರಕ್ಷತೆಗೆ ಈ ಕ್ರಮ ಅತ್ಯಗತ್ಯ. ದಿನನಿತ್ಯ ದೇಶದಾದ್ಯಂತ ನೂರಾರು ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿದ್ದಾರೆ. ಇವರಲ್ಲಿ, ಅಪಘಾತವಾದಾಗ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಇದ್ದ ಕಾರಣಕ್ಕೆ ಪ್ರಾಣ ಕಳೆದುಕೊಂಡಿರುವವರೂ ಬಹಳಷ್ಟು ಜನ ಇರುತ್ತಾರೆ. ಈಗ ಖ್ಯಾತನಾಮರೊಬ್ಬರ ಸಾವು ಸೀಟ್ ಬೆಲ್ಟ್‌ನ ಮಹತ್ವವನ್ನು ಮುನ್ನೆಲೆಗೆ ತಂದಿದೆ. ಈ ಅಪಘಾತದಿಂದ ಹೆದ್ದಾರಿಯ ವಿನ್ಯಾಸದೋಷ, ರಸ್ತೆಗಳ ಅಸಮರ್ಪಕ ನಿರ್ವಹಣೆಯಂತಹ ವಿಷಯಗಳ ಬಗ್ಗೆಯೂ ಗಮನ ಹರಿಯುವಂತಾದರೆ ಒಳ್ಳೆಯದು.

– ಎ.ಜೆ.ಜಾವಿದ್,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT