ADVERTISEMENT

ವಾಚಕರ ವಾಣಿ| ಪಡಿತರ ಚೀಟಿ: ಪಾರದರ್ಶಕತೆ ನಿರಂತರವಾಗಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಸೆಪ್ಟೆಂಬರ್ 2022, 19:31 IST
Last Updated 6 ಸೆಪ್ಟೆಂಬರ್ 2022, 19:31 IST

ಅಕ್ರಮ ಮಾರ್ಗಗಳಿಂದ ಪಡೆದಿದ್ದ 3.30 ಲಕ್ಷ ನಕಲಿ ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರವು ಪತ್ತೆ ಹಚ್ಚಿ ರದ್ದ ುಗೊಳಿಸಿದ್ದು ಶ್ಲಾಘನೀಯ. ಅನರ್ಹರ ಪಾಲಾಗುತ್ತಿದ್ದ ಪಡಿತರ ಪದಾರ್ಥಗಳು ಇನ್ನು ಮುಂದಾದರೂ ದುರುಪಯೋಗ ವಾಗದಂತೆ ನೋಡಿಕೊಳ್ಳುವುದು ಮುಖ್ಯ. ಆಹಾರ ಇಲಾಖೆಯು ಈ ಪಾರದರ್ಶಕತೆಯನ್ನು ನಿರಂತರವಾಗಿ ಕಾಪಾಡಿಕೊಂಡು, ಪಡಿತರ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕು. ಹಾಗೆಯೇ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.

- ಆರ್.ಬಿ.ಜಿ.ಘಂಟಿ,ಅಮೀನಗಡ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT