ADVERTISEMENT

ಕಂಬಾರರು ಮತ್ತೊಮ್ಮೆ ಯೋಚಿಸಬೇಕು

ಸಾವಿತ್ರಿ ಮಜುಂದಾರ
Published 4 ನವೆಂಬರ್ 2018, 20:00 IST
Last Updated 4 ನವೆಂಬರ್ 2018, 20:00 IST

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರರು ಮೀ ಟೂ ಕುರಿತಾಗಿ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದುದು. ‘ಪಶ್ಚಿಮದಲ್ಲಿ ಮತ್ತು ನಮ್ಮಲ್ಲಿ ಹೊಸ ಮಾದರಿಗಳು ಹುಟ್ಟುತ್ತಿಲ್ಲವಾದ್ದರಿಂದ ಹೆಂಗಸರು ಗಂಡಸರನ್ನು ಬಯ್ಯಲು ಪ್ರಾರಂಭಿಸಿ ಅದಕ್ಕೆ ದೌರ್ಜನ್ಯವೆಂಬ ಪದ ಉಪಯೋಗಿಸುತ್ತಿದ್ದಾರೆ... 13 ವರ್ಷದ ಮಗು ಸ್ತ್ರೀಯರ ಮೇಲೆ ದೌರ್ಜನ್ಯ ಅಂತ ನಿಂತರೆ ಹೇಗೆ?’ (ಪ್ರ.ವಾ., ನ. 2) ಎಂದು ಅವರು ಪ್ರಶ್ನಿಸಿದ್ದಾರೆ.

ದನಿಯೇ ಇಲ್ಲದ ಮಹಿಳೆಯರು ಇತ್ತೀಚೆಗೆ ಧ್ವನಿ ಪಡೆದುಕೊಂಡು ತಮ್ಮ ಮೇಲಾದ ಲೈಂಗಿಕ ಕಿರುಕುಳವನ್ನು ‘ಮೀ ಟೂ’ ಮೂಲಕ ಜನಸಮುದಾಯದ ಮುಂದೆ ಇಡುತ್ತಿದ್ದಾರೆ. ‘ಗಂಡು ಭಯೋತ್ಪಾದನೆ’ಯ ವಿರುದ್ಧ ಸಾಮಾಜಿಕ ಜಾಲತಾಣದ ಮುಖಾಂತರ ಹೋರಾಡುತ್ತಿದ್ದಾರೆ. ಆದರೆ ಕಂಬಾರರು ಇದರ ಅರಿವು ಇಲ್ಲದೆ ‘ಬಯ್ಯುತ್ತಿದ್ದಾರೆ’ ಎಂಬ ಮಾತುಗಳನ್ನಾಡಿದ್ದು ಖಂಡನೀಯ. ಅಲ್ಲದೇ, 13 ವರ್ಷದ ಮಗುವಿನ ಮೇಲೆ ಆದ ದೌರ್ಜನ್ಯವನ್ನು ಅವರು ಒಪ್ಪುತ್ತಿಲ್ಲ ಎಂಬುದೇ ಅಚ್ಚರಿಯ ವಿಚಾರ. 4 ವರ್ಷದ ಮಗುವಿನಿಂದ ಆರಂಭಿಸಿ 72 ವರ್ಷದ ವೃದ್ಧೆಯವರೆಗೆ ಅನೇಕ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಪಟ್ಟಿ ನಮ್ಮ ಮುಂದಿದೆ. ಕಂಬಾರರ ಹೇಳಿಕೆಯನ್ನು ಗಮನಿಸಿದರೆ ಈ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಅವರಿಗೆ ತಿಳಿವಳಿಕೆ ಇದ್ದಂತಿಲ್ಲ ಎನಿಸುತ್ತದೆ. ಮೀ ಟೂ ನಡೆಸುವ ಸಾಮಾಜಿಕ ಜಾಗೃತಿ ಮತ್ತು ಮಹಿಳಾ ಧ್ವನಿಯ ಕುರಿತು ಅವರು ಸತ್ಯಾನ್ವೇಷಣೆ ಮಾಡುತ್ತಿಲ್ಲ. ಮಾಹಿತಿಯ ಕೊರತೆಯಿಂದಾಗಿ ಅವರು ಹೀಗೆ ಮಾತನಾಡಿರಬಹುದು. ಈ ಬಗ್ಗೆ ಅವರು ಸಮಗ್ರವಾಗಿ ಮಾಹಿತಿ ಪಡೆದು ಆಳವಾದ ಚಿಂತನೆ ನಡೆಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT