ADVERTISEMENT

ಕೋವಿಡ್‌ ಪ್ರಕರಣ: ಬದಲಾಗಲಿ ದೃಷ್ಟಿಕೋನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಜುಲೈ 2021, 19:30 IST
Last Updated 30 ಜುಲೈ 2021, 19:30 IST

ಕೊರೊನಾ ಎರಡನೇ ಅಲೆಯ ಆರ್ಭಟ ತಗ್ಗಿ ನಿಟ್ಟುಸಿರು ಬಿಡುತ್ತಿರುವಂತೆಯೇ ಮೂರನೇ ಅಲೆಯ ಎಚ್ಚರಿಕೆ ಸಂದೇಶಗಳು ಕೇಳಿಬರುತ್ತಿವೆ. ಆದರೆ ಮಳೆಯ ಆರ್ಭಟ, ರಾಜಕೀಯ ಸ್ಥಿತ್ಯಂತರಗಳ ಮೇಲಾಟದ ನಡುವೆ ಅದು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿಲ್ಲ. ಎರಡನೇ ಅಲೆ ಪ್ರಾರಂಭದಿಂದಲೂ ಮತ್ತು ಈಗಲೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವುದು ಮಹಾರಾಷ್ಟ್ರ ಮತ್ತು ಕೇರಳದಲ್ಲಿ.

ಕುತೂಹಲಕಾರಿಯಾದ ಈ ವಿದ್ಯಮಾನಕ್ಕೆ ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಸೆರೊ ಸಮೀಕ್ಷೆಯ ವರದಿಯಲ್ಲಿ (ಪ್ರ.ವಾ., ಜುಲೈ 29) ಉತ್ತರವಿದೆ. ಕೇರಳದಲ್ಲಿ ಪ್ರತೀ ಆರು ಪ್ರಕರಣಗಳಲ್ಲಿ ಒಂದು ಪ್ರಕರಣ ಪತ್ತೆಯಾದರೆ, ಮಹಾರಾಷ್ಟ್ರದಲ್ಲಿ ಪ್ರತೀ ಹನ್ನೆರಡು ಪ್ರಕರಣಗಳಲ್ಲಿ ಒಂದು, ಬಿಹಾರದಲ್ಲಿ ಪ್ರತೀ 134 ಕೋವಿಡ್ ಪ್ರಕರಣಗಳಲ್ಲಿ ಒಂದು ಪ್ರಕರಣವಷ್ಟೇ ಪತ್ತೆಯಾಗಿವೆ. ಅಂದರೆ ಕೋವಿಡ್ ಪ್ರಕರಣಗಳು ಕೆಲವು ರಾಜ್ಯಗಳಲ್ಲಿ ಹೆಚ್ಚು, ಕೆಲವು ರಾಜ್ಯಗಳಲ್ಲಿ ಕಡಿಮೆ ವರದಿಯಾಗುತ್ತಿರುವುದರ ಅಸಲಿಯತ್ತು ಈಗ ಗೊತ್ತಾಗಿದೆ.

ಕಡಿಮೆ ಪತ್ತೆಯಾದ ರಾಜ್ಯಗಳ ಸಾಧನೆ ಮತ್ತು ಹೆಚ್ಚು ವರದಿಯಾಗುತ್ತಿರುವ ರಾಜ್ಯಗಳ ನ್ಯೂನತೆಯನ್ನು ಇನ್ನು ಬೇರೊಂದು ದೃಷ್ಟಿಕೋನದಿಂದ ನೋಡಬೇಕಿದೆ. ಇನ್ನಾದರೂ ಹೆಚ್ಚು ಪ್ರಕರಣಗಳು ವರದಿಯಾಗುವ ರಾಜ್ಯಗಳನ್ನು ಬಿಟ್ಟು ಕಡಿಮೆ ಪ್ರಕರಣಗಳು ಪತ್ತೆಯಾಗುವ ರಾಜ್ಯಗಳತ್ತ ಗಮನಹರಿಸುವುದು ಒಳ್ಳೆಯದು.

ADVERTISEMENT

- ಹೊಸಮನೆ ವೆಂಕಟೇಶ,ಟಿ.ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.