ADVERTISEMENT

ವಾಚಕರ ವಾಣಿ| ಒಕ್ಕೊರಲಿನಿಂದ ಪ್ರಶ್ನಿಸೋಣ

​ಪ್ರಜಾವಾಣಿ ವಾರ್ತೆ
Published 19 ಮೇ 2020, 20:15 IST
Last Updated 19 ಮೇ 2020, 20:15 IST

ರೈತರ ಬದುಕು ಬಹಳ ಕಷ್ಟದಲ್ಲಿದೆ ಎಂಬುದು ರಾಜಕಾರಣಿಗಳಿಗೂ ತುಂಬಾ ಚೆನ್ನಾಗಿಯೇ ತಿಳಿದಿದೆ. ಆದರೆ ಅವರು ಚುನಾವಣೆ ನಂತರ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳುವ ಕ್ರಮಗಳು ಎರಡೇ. ಅವೆಂದರೆ, ಬಿಡಿಗಾಸಿನ ಪರಿಹಾರ ಹಾಗೂ ಸಾಲ ಮನ್ನಾ. ಜವಾಬ್ದಾರಿಯುತ ನಾಗರಿಕರಾದ ನಾವು ಸರ್ಕಾರಗಳಿಗೆ ಪಕ್ಷಾತೀತವಾಗಿ ಕೆಳಗಿನ ಪ್ರಶ್ನೆಗಳನ್ನು ಕೇಳಲೇಬೇಕಿದೆ. ಗ್ರಾಮೀಣ ರಸ್ತೆಗಳನ್ನು, ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಯಾವಾಗ? ಕೋಲ್ಡ್‌ ಸ್ಟೋರೇಜ್‌ಗಳನ್ನು ಅಭಿವೃದ್ಧಿಪಡಿಸುವುದು ಎಂದು? ಗ್ರಾಮೀಣ ಕೃಷಿ ಉದ್ಯೋಗಗಳನ್ನು ಹೆಚ್ಚಿಸಲು ಸರ್ಕಾರಗಳು ಏಕೆ ಮುಂದಾಗುತ್ತಿಲ್ಲ? ಇವನ್ನೆಲ್ಲಾ ನಾವು ಪ್ರಶ್ನಿಸದೇ ಇದ್ದರೆ ರೈತರ ಸಮಸ್ಯೆಗಳು ದ್ವಿಗುಣಗೊಳ್ಳುತ್ತವೆ ಹೊರತು ಕೃಷಿ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ.

-ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT