ADVERTISEMENT

ಬದಲಾಗಲಿ ಕಾರ್ಯವೈಖರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:30 IST
Last Updated 18 ಡಿಸೆಂಬರ್ 2019, 19:30 IST

ನಾನು 25 ವರ್ಷಗಳಿಂದ ಬಿ.ಎಸ್.ಎನ್.ಎಲ್. ಗ್ರಾಹಕನಾಗಿದ್ದೆ. ಲ್ಯಾಂಡ್‌ಲೈನ್ ಫೋನಿನ ಸಂಪರ್ಕವನ್ನು ಹೊಂದಿದ್ದು, ಸುಮಾರು ಎರಡು ವರ್ಷಗಳ ಕಾಲ ಅದರ ಮೇಲೆ ಇಂಟರ್‌ನೆಟ್ ಸಂಪರ್ಕವನ್ನು ಕೂಡ ಪಡೆದಿದ್ದೆ. ಆದರೆ ಇಂಟರ್‌ನೆಟ್ ಸೇವೆ ಸಮರ್ಪಕವಾಗಿಲ್ಲದ ಕಾರಣ ಆ ಸೇವೆಯನ್ನು ಸ್ಥಗಿತಗೊಳಿಸಿ ಬರೀ ಲ್ಯಾಂಡ್‌ಲೈನ್ ಫೋನ್ ಸಂಪರ್ಕವನ್ನು ಮಾತ್ರ ಉಳಿಸಿಕೊಂಡಿದ್ದೆ. ಇತ್ತೀಚೆಗೆ ಆ ಸೇವೆಯೂ ಹದಗೆಟ್ಟದ್ದರಿಂದ ಆ ಸೇವೆಯನ್ನೂ ಸ್ಥಗಿತಗೊಳಿಸಲು ಅಕ್ಟೋಬರ್‌ನಲ್ಲಿ ಅರ್ಜಿಯನ್ನು ಸಲ್ಲಿಸಿ ಉಪಕರಣವನ್ನು ಕಚೇರಿಗೆ ಹಿಂದಿರುಗಿಸಿದೆ.

ನಾನು ಫೋನ್ ಸಂಪರ್ಕ ಪಡೆಯುವಾಗ ಮತ್ತು ಇಂಟರ್‌ನೆಟ್ ಸಂಪರ್ಕ ಪಡೆಯುವಾಗ ಬಿ.ಎಸ್.ಎನ್.ಎಲ್. ಕಚೇರಿಯವರು ಪಡೆದಿದ್ದ ಠೇವಣಿ ಹಣ ನನಗೆ ಬರಬೇಕಾಗಿತ್ತು. ನವೆಂಬರ್ 11ಕ್ಕೆ ನಿಮ್ಮ ಠೇವಣಿ ಹಣವನ್ನು ಹಿಂದಿರುಗಿಸಲಾಗುವುದು ಎಂಬ ಒಂದು ಸಂದೇಶ ನನ್ನ ಮೊಬೈಲ್‌ ಫೋನಿಗೆ ಬಂದಿತ್ತು. ಆದರೆ ನವೆಂಬರ್ ಕಳೆದು ಡಿಸೆಂಬರ್ ಅರ್ಧ ಅವಧಿ ಮುಗಿದಿದ್ದರೂ ನನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿಲ್ಲ.

ನಾನೇನಾದರೂ ತಿಂಗಳ ಬಿಲ್ ತುಂಬಲು ಒಂದೆರಡು ದಿವಸ ತಡ ಮಾಡಿದರೆ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆಯ ಸಂದೇಶಗಳು ನಿರಂತರವಾಗಿ ಬರುತ್ತಲೇ ಇರುತ್ತಿದ್ದವು. ಅದೇ ನ್ಯಾಯ ಗ್ರಾಹಕರಿಗೆ ಅನ್ವಯ
ವಾಗುವುದು ಬೇಡವೇ?

ADVERTISEMENT

ಮುರಳೀಧರ ಕುಲಕರ್ಣಿ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.