ಪ್ರಸಕ್ತ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ನೀಡಿರುವುದು ಅತ್ಯಂತ ಅವೈಜ್ಞಾನಿಕವಾದುದು. ಇದರಿಂದ ನಿಗದಿತ ಅವಧಿಯೊಳಗೆ ಸಾರ್ವಜನಿಕರೆಲ್ಲರೂಮಾರುಕಟ್ಟೆಗೆ ಬರುವುದು ಅನಿವಾರ್ಯವಾಗಿ, ಸಹಜವಾಗಿಯೇ ಜನದಟ್ಟಣೆ ಉಂಟಾಗುತ್ತದೆ. ಮತ್ತದೇ ಲಾಠಿಚಾರ್ಜ್, ಮತ್ತದೇ ಗೋಳು. ಕಳೆದ ವರ್ಷವೂ ಇಂಥದ್ದೇ ತೀರ್ಮಾನ ತೆಗೆದುಕೊಂಡಾಗ ಆದ ಸಮಸ್ಯೆಗಳು ಸರ್ಕಾರದ ಗಮನದಲ್ಲಿ ಇಲ್ಲವೇ?
ತರಕಾರಿ, ದಿನಸಿ ವ್ಯಾಪಾರಕ್ಕೆ ದಿನವಿಡೀ ಅವಕಾಶ ನೀಡಿದರೆ ಸಾರ್ವಜನಿಕರು ಅಂತರ ಕಾಯ್ದುಕೊಂಡು ಬೇರೆ ಬೇರೆ ಸಮಯದಲ್ಲಿ ಮಾರುಕಟ್ಟೆಗೆ ಬಂದು ಹೋಗಲು ಅನುಕೂಲವಾಗುತ್ತದೆ. ಇದರಿಂದ ಜನಸಾಂದ್ರತೆಯನ್ನು ಬಹುತೇಕ ಕಡಿಮೆ ಮಾಡಬಹುದು. ಪೊಲೀಸರಿಗೂ ತಲೆಬಿಸಿ ಕಡಿಮೆಯಾಗುತ್ತದೆ.
-ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.