ADVERTISEMENT

ವಾಚಕರ ವಾಣಿ | ನೀರು ಲಭ್ಯ, ಸಂಗ್ರಹಕ್ಕೆ ಇಚ್ಛಾಶಕ್ತಿಯ ಕೊರತೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 19:19 IST
Last Updated 16 ನವೆಂಬರ್ 2022, 19:19 IST

ಅಂತರ್ಜಲ ಮಾಲಿನ್ಯದಿಂದಾಗಿ ಕುಡಿಯುವ ಶುದ್ಧ ನೀರು ದುರ್ಲಭವಾಗುತ್ತಿದೆ ಎಂದು ಕೇಶವ ಕೊರ್ಸೆ ತಮ್ಮ ಲೇಖನದಲ್ಲಿ (ಪ್ರ.ವಾ., ನ. 15) ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಕುಡಿಯಲು, ಗೃಹ ಬಳಕೆಗೆ, ಕೃಷಿ, ಕೈಗಾರಿಕೆಗೆ ಯಥೇಚ್ಛವಾಗಿ ಪರಿಶುದ್ಧ ಮಳೆನೀರು ದೊರೆಯುತ್ತದೆ. ಆದರೆ ಮಳೆನೀರಿನ ಸಂಗ್ರಹ, ಜಾಣ್ಮೆಯ ಬಳಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡದೇ ಇರುವುದರಿಂದ ನೀರು ದುರ್ಲಭವಾಗುತ್ತಿದೆ.

ಮನೆಯ ತಾರಸಿ ಮೇಲೆ ಬೀಳುವ ಶುದ್ಧ ಮಳೆನೀರನ್ನು ಮನೆಯಲ್ಲಿ, ಹೊಲ- ಗದ್ದೆಗಳಲ್ಲಿ ಬೀಳುವ ಮಳೆ ನೀರನ್ನು ಕೃಷಿ ಹೊಂಡ ಹಾಗೂ ಕೆರೆಗಳಲ್ಲಿ ಸಂಗ್ರಹ ಮಾಡಿ ಬಳಸಬೇಕು. ಆಗ ನೀರು ಸಮೃದ್ಧಿಯಾಗಿ ಲಭಿಸಿ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗುತ್ತದೆ. ಇದಕ್ಕೆ ಇಸ್ರೇಲ್ ದೇಶ ನಿದರ್ಶನವಾಗಿದೆ. ಮಳೆ ನೀರಿನ ಸಂಗ್ರಹವು ಸುಸ್ಥಿರ ಅಭಿವೃದ್ಧಿಗೆ ಮಾರ್ಗ ಎಂಬುದನ್ನು ಕಡಿಮೆ ಮಳೆ ಬೀಳುವ ಇಸ್ರೇಲ್ ದೇಶ ತೋರಿಸಿಕೊಟ್ಟಿದೆ.

–ಡಾ. ಎಚ್.ಆರ್‌.ಪ್ರಕಾಶ್,ಕೆ.ಬಿ.ದೊಡ್ಡಿ, ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.