ADVERTISEMENT

ವಾಚಕರ ವಾಣಿ: ಶಾಲೆ ಆರಂಭ: ಇರಲಿ ಎಚ್ಚರ

​ಪ್ರಜಾವಾಣಿ ವಾರ್ತೆ
Published 1 ಮೇ 2022, 19:30 IST
Last Updated 1 ಮೇ 2022, 19:30 IST

ಕೊರೊನಾ ನಾಲ್ಕನೇ ಅಲೆಯ ಆತಂಕದ ನಡುವೆಯೂ ನಿಗದಿಯಂತೆ ಇದೇ 16ರಿಂದ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳಿಗೆ ಕಲಿಕೆಯು ಎಷ್ಟು ಮುಖ್ಯವೋ ಆರೋಗ್ಯವೂ ಅಷ್ಟೇ ಮುಖ್ಯವಾದದ್ದು. ಮೂರನೇ ಅಲೆಯಲ್ಲಿ ಹೆಚ್ಚು ಸಾವು ನೋವು ಸಂಭವಿಸದೇ ಇದ್ದುದಕ್ಕೆ ಮುಖ್ಯ ಕಾರಣ ಲಸಿಕೆ. ಎರಡನೇ ಅಲೆಯಲ್ಲಿ ಪೆಟ್ಟು ತಿಂದ ಅನೇಕ ಕುಟುಂಬಗಳು ಮೂರನೇ ಅಲೆ ಬರುವಷ್ಟರೊಳಗೆ ಲಸಿಕೆ ಪಡೆದಿದ್ದವು. ಆ ಲಸಿಕೆಯ ಶಕ್ತಿ ಆರು ತಿಂಗಳವರೆಗೆ ಇತ್ತು. ಆದರೆ ಇದೀಗ ಎರಡನೇ ಡೋಸ್ ಪಡೆದವರಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ವಿಜ್ಞಾನಿಗಳ ಪ್ರಕಾರ, ಒಂದು ಲಸಿಕೆಯ ಪರಿಣಾಮ ಆರು ತಿಂಗಳಿಗಿಂತ ಹೆಚ್ಚಿಗೆ ಇರುವುದಿಲ್ಲ ಎನ್ನಲಾಗಿದೆ.

ಇಂತಹ ಸಮಯದಲ್ಲಿ ಎಲ್ಲರೂ ಮತ್ತೊಂದು ಡೋಸ್ ಲಸಿಕೆ ಪಡೆಯುವುದು ವಿಹಿತ. ಮುಖ್ಯವಾಗಿ, ಶಾಲೆಗಳು ಪ್ರಾರಂಭವಾಗುವುದಕ್ಕಿಂತ ಮುಂಚೆ ಮಕ್ಕಳಿಗೆ ಲಸಿಕೆ ಹಾಕಿ, ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ಮಕ್ಕಳಿಗೆ ತರಬೇತಿ ನೀಡಬೇಕಾದ ಅಗತ್ಯವಿದೆ. ಶಿಕ್ಷಕರು ಕೂಡ ಕೋವಿಡ್ ನಿಯಮ ಪಾಲನೆಗೆ ಹೆಚ್ಚಿನ ನಿಗಾ ವಹಿಸುವ ಮೂಲಕ ವಿದ್ಯಾರ್ಥಿಗಳ ಸುರಕ್ಷತೆಯತ್ತ ಗಮನಹರಿಸಬೇಕಿದೆ.

- ಡಾ. ಮಹೇಶ್ ಮೂರ್ತಿ,ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.