ADVERTISEMENT

ವಾಚಕರವಾಣಿ: ಅಡಿಕೆ ನಿಷೇಧದ ಬಗ್ಗೆ ಗುಲ್ಲೇಳುವುದೇಕೆ?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 19:31 IST
Last Updated 11 ನವೆಂಬರ್ 2021, 19:31 IST

ಅಡಿಕೆಯಿಂದ ಕ್ಯಾನ್ಸರ್‌ನಂಥ ರೋಗಗಳು ಬರುತ್ತವೆ, ಹೀಗಾಗಿ ಅಡಿಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಜಾರ್ಖಂಡ್‌ನ ಬಿಜೆಪಿ ಸಂಸದರೊಬ್ಬರು ಪ್ರಧಾನಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ. ಅನಾದಿ ಕಾಲದಿಂದಲೂ ಹಳ್ಳಿಯ ಜನ ಪರಂಪರಾನುಗತವಾಗಿ ಅಡಿಕೆ ತಿನ್ನುತ್ತಲೇ ಬಂದಿದ್ದಾರೆ. ಅಡಿಕೆ ಬರಿಯ ತಿನ್ನುವ ವಸ್ತುವೊಂದೇ ಅಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತೀಕ. ಮನೆಗೆ ನೆಂಟರಿಷ್ಟರು ಬಂದಾಗ ಊಟವಾದ ಬಳಿಕ ತಾಂಬೂಲವನ್ನು ಒಂದು ತಟ್ಟೆಗೆ ಹಾಕಿಕೊಡುವುದು ಹಿಂದಿನಿಂದಲೂ ಬಂದಿರುವ ಪದ್ಧತಿ.

ಅಡಿಕೆ ತಿಂದವರಿಗೇನಾದರೂ ಕ್ಯಾನ್ಸರ್ ಬರುವುದಾಗಿದ್ದಿದ್ದರೆ ಇಂದು ಯಾರೂ ಉಳಿದಿರುತ್ತಿರಲಿಲ್ಲ. ನೇರವಾಗಿ ಕ್ಯಾನ್ಸರ್ ತರಬಹುದಾದಂಥ ತಂಬಾಕು, ಸಿಗರೇಟುಗಳ ನಿಷೇಧದ ಬಗ್ಗೆ ಒಮ್ಮೆಯೂ ಸೊಲ್ಲೆತ್ತದೆ ಅಡಿಕೆ ನಿಷೇಧದ ಬಗ್ಗೆ ಆಗಾಗ್ಗೆ ಗುಲ್ಲೇಳುವುದರ ಹಿಂದಿನ ರಹಸ್ಯವಾದರೂ ಏನು ಎನ್ನುವುದು ಬಹಿರಂಗವಾಗಬೇಕಿದೆ!

- ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರು, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.