ADVERTISEMENT

ವಾಚಕರವಾಣಿ: ಅಗೋಚರ ಭ್ರಷ್ಟಾಚಾರ, ಬದಲಾಗಲಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:31 IST
Last Updated 12 ನವೆಂಬರ್ 2021, 19:31 IST

ಹಲವು ಐಎಎಸ್‌ ಅಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ನಿವೃತ್ತಿಯ ನಂತರ ಯಾವುದೋ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಪರಿಪಾಟ ಕಾಣುತ್ತಿರುವ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಸಂಜಯ್ ದೀಕ್ಷಿತ್ ಪ್ರಸ್ತಾಪಿಸಿದ್ದಾರೆ (ದಿನದ ಟ್ವೀಟ್, ಪ್ರ.ವಾ., ನ.11). ಇಂತಹ ಬೆಳವಣಿಗೆಯಿಂದ ಆಗುವ ಬಹುದೊಡ್ಡ ಅಗೋಚರ ಭ್ರಷ್ಟಾಚಾರದ ಜ್ವಲಂತ ಸಮಸ್ಯೆ ಕುರಿತ ಅವರ ಹೇಳಿಕೆಯು ವಾಸ್ತವ ಎನಿಸುತ್ತಿದೆ. ಸರ್ಕಾರ ಈ ಸಂಬಂಧ ಕಾನೂನಿಗೆ ತಿದ್ದುಪಡಿ ತರಬೇಕಿದೆ.

ಐಎಎಸ್, ಐಪಿಎಸ್, ಕೆಎಎಸ್‌ನಂತಹ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಾಗಲೇ ಸರ್ಕಾರವು ಬಹಳಷ್ಟು ವೇತನ ಹಾಗೂ ಸೌಲಭ್ಯಗಳನ್ನು ನೀಡುವುದಲ್ಲದೆ ನಿವೃತ್ತಿಯ ನಂತರವೂ ನಿವೃತ್ತಿ ವೇತನ ಹಾಗೂ ಸೌಲಭ್ಯಗಳನ್ನು ಮುಂದುವರಿಸಿರುತ್ತದೆ. ಆದರೆ ಯಾಕೋ ಏನೋ ಬಹುತೇಕರು ನಿವೃತ್ತಿಯ ನಂತರ ಮೊದಲಿದ್ದ ಅಧಿಕಾರ ಬಳಸಿ ಯಾವುದೋ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವಂತಹ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವುದು, ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗುವುದು, ಚುನಾವಣೆಗಳಲ್ಲಿ ಸ್ಪರ್ದಿಸುವುದನ್ನು ನೋಡಿದರೆ, ಅಧಿಕಾರದಲ್ಲಿದ್ದಾಗ ಅವರ ಮೇಲಿದ್ದ ಜನರ ಭಾವನೆ ನಿವೃತ್ತಿ ನಂತರ ಬದಲಾಗುವಂತಿರುತ್ತದೆ. ಈ ವ್ಯವಸ್ಥೆ ಬದಲಾಗಬೇಕು. ಸರ್ಕಾರ ಈ ಸಂಬಂಧ ಸೂಕ್ತ ಕಾನೂನು ತಿದ್ದುಪಡಿ ತರಬೇಕಿದೆ.

- ಶಿವಕುಮಾರ್ ಯರಗಟ್ಟಿಹಳ್ಳಿ,ಚನ್ನಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.