ಕೋವಿಡ್ ಎರಡನೇ ಅಲೆಯ ಹೊಡೆತದಿಂದ ಇಡೀ ರಾಜ್ಯ ತಲ್ಲಣಗೊಂಡಿರುವ ಹೊತ್ತಿನಲ್ಲಿ ಮಂಗಳವಾರ ಮಧ್ಯಾಹ್ನ ಮಾಧ್ಯಮಗಳು ಬಿತ್ತರಿಸಿದ ಸುದ್ದಿ ಅತ್ಯಂತ ಆಘಾತಕಾರಿಯಾಗಿತ್ತು. ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ತಂಡ ‘ಬೆಡ್ ಬ್ಲಾಕಿಂಗ್’ನಂತಹ ಭ್ರಷ್ಟಾಚಾರದ ಕರಾಳ ಮುಖವನ್ನು ಬಯಲಿಗೆ ತಂದಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಮನೆಗಳು ಸೋಂಕಿತರಿಂದ, ಸಾವು– ನೋವಿನಿಂದ ತುಂಬಿರುವ ಹೊತ್ತಿನಲ್ಲಿ ಬಿಬಿಎಂಪಿ ಸಿಬ್ಬಂದಿ ‘ಉರಿಯುತ್ತಿರುವ ಮನೆಯ ಗಳ ಹಿರಿಯುವ ಕೆಲಸ’ ಮಾಡಿರುವುದು ಅತ್ಯಂತ ಅಮಾನವೀಯ.
ಸರ್ಕಾರ ಇನ್ನಾದರೂ ತನ್ನ ಹೊಣೆ ಅರಿತುನಿಷ್ಪಕ್ಷಪಾತವಾದ ತನಿಖೆ ನಡೆಸಲಿ. ಈ ಕೃತ್ಯದಲ್ಲಿ ಶಾಮೀಲಾದ ಎಲ್ಲರನ್ನೂ ಶಿಕ್ಷಿಸಲಿ. ಬೆಂಗಳೂರಿನಲ್ಲಿ ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆ ಸಿಗದೆ ಸತ್ತವರ ಆತ್ಮಕ್ಕೆ ಆ ಮೂಲಕವಾದರೂ ನ್ಯಾಯ ಸಿಗುವಂತಾಗಲಿ.
ಡಾ. ಅರ್ಚನಾ ಆರ್., ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.