ADVERTISEMENT

ವಾಚಕರ ವಾಣಿ | ಉಚಿತ ಕೊಡುಗೆ ‘ಅಸ್ತ್ರ’ ಕಳವಳಕಾರಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 22:12 IST
Last Updated 9 ಆಗಸ್ಟ್ 2022, 22:12 IST

ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಘೋಷಣೆ ಮಾಡುವ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಈ ಹಿಂದೆ ಒಂದೆರಡು ರಾಜ್ಯಗಳಿಗೆ ಸೀಮಿತವಾಗಿದ್ದ ಉಚಿತ ಕೊಡುಗೆಗಳ ಭರಾಟೆಯು ಈಗ ದೇಶದಾದ್ಯಂತ ಮತದಾರರನ್ನು ಸೆಳೆಯುವ ಅಸ್ತ್ರದಂತೆ ಬಳಕೆಯಾಗುತ್ತಿರುವುದು ಕಳವಳಕಾರಿ. ಹೇಗಾದರೂ ಸರಿ ಅಧಿಕಾರಕ್ಕೆ ಏರಲೇಬೇಕು ಎಂಬ ಉಮೇದಿನೊಂದಿಗೆ ರಾಜಕೀಯ ಪಕ್ಷಗಳು ಚುನಾವಣೆ ಪೂರ್ವದಲ್ಲಿ ಮಾಡುವ ಈ ಘೋಷಣೆಗಳು ಜಾರಿಗೆ ಬಂದರೆ ಅವುಗಳ ಹೊರೆ ಬೀಳುವುದು ತೆರಿಗೆದಾರರ ಮೇಲೆಯೇ.

ರಾಜಕೀಯ ಪಕ್ಷಗಳು ಆದಾಯ ಹೆಚ್ಚಳ, ಆರ್ಥಿಕ ವೃದ್ಧಿ ಹಾಗೂ ಉದ್ಯೋಗಾವಕಾಶಗಳ ಮೂಲಕ ದುಡಿಯುವ ವರ್ಗವನ್ನು ಸೃಷ್ಟಿಸಬೇಕೇ ವಿನಾ ಉಚಿತ ಕೊಡುಗೆಗಳನ್ನು ನೀಡುವ ಮೂಲಕ ರಾಜ್ಯಗಳ ಆರ್ಥಿಕತೆಯನ್ನು ಹದಗೆಡಿಸುವುದಲ್ಲ. ಈ ಸಂಬಂಧ ತಜ್ಞರ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವುದು ಪ್ರಶಂಸನೀಯ ಸಂಗತಿ.
-ಹರಳಹಳ್ಳಿ ಪುಟ್ಟರಾಜು,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT