ADVERTISEMENT

ವಾಚಕರ ವಾಣಿ: ಇಲ್ಲದ ಬದ್ಧತೆ, ಕಡೆಗಣನೆಯ ಬಿಸಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 21:45 IST
Last Updated 1 ಮಾರ್ಚ್ 2022, 21:45 IST

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ರಾಜ್ಯ ಸರ್ಕಾರದ ಒಂದೊಂದು ಇಲಾಖೆಗೆ ಸದಸ್ಯರೊಂದಿಗೆ ಭೇಟಿ ಕೊಟ್ಟು, ಅಲ್ಲಿ ಕನ್ನಡದ ಬಳಕೆ ಎಷ್ಟರಮಟ್ಟಿಗೆ ಆಗುತ್ತಿದೆ ಎಂದು ಪರಿಶೀಲನೆ ನಡೆಸಿ ಪತ್ರಿಕೆಗಳಿಗೆ ಹೇಳಿಕೆ ಕೊಡುತ್ತಿದ್ದಾರೆ. ಈವರೆಗೆ ಭೇಟಿ ನೀಡಿರುವ ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ.

ಬಹುಮಟ್ಟಿನ ವ್ಯವಹಾರ ಇಂಗ್ಲಿಷಿನಲ್ಲೇ ನಡೆಯುತ್ತಿದೆ. ಮೊಹರುಗಳೂ ಇಂಗ್ಲಿಷ್‌ನಲ್ಲಿವೆ. ವೆಬ್‌ ಪೋರ್ಟಲ್‌, ಸಾಮಾಜಿಕ ಜಾಲತಾಣ, ಕಡತಗಳಲ್ಲೂ ಇಂಗ್ಲಿಷ್‌ ರಾರಾಜಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಆಡಳಿತ ಭಾಷೆಯಾಗಿ ಹಲವು ದಶಕಗಳು ಕಳೆದಿದ್ದರೂ ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡದಲ್ಲಿ ವ್ಯವಹಾರ ನಡೆಯುತ್ತಿಲ್ಲ ಎಂದರೆ ರಾಜ್ಯ ಸರ್ಕಾರಕ್ಕೆ ಕನ್ನಡದ ಬಗೆಗೆ ಕಾಳಜಿಯಾಗಲೀ ಬದ್ಧತೆಯಾಗಲೀ ಇಲ್ಲವೆಂದೇ ಅರ್ಥವಲ್ಲವೆ? ಹಿಜಾಬ್‌– ಕೇಸರಿ ಶಾಲಿನ ಬಗ್ಗೆ ಅತ್ಯುತ್ಸಾಹದಿಂದಲೂ ಆವೇಶದಿಂದಲೂ ಮಾತನಾಡುವ ಮಂತ್ರಿಮಹೋದಯರು, ಪ್ರತಿಪಕ್ಷಗಳ ಮುಖಂಡರು ಕನ್ನಡದ ಕಡೆಗಣನೆಯ ಬಗೆಗೆ ಯಾಕೆ ಧ್ವನಿ ಎತ್ತುತ್ತಿಲ್ಲ?

ADVERTISEMENT

ಬೈರಮಂಗಲ ರಾಮೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.