ADVERTISEMENT

ವಾಚಕರ ವಾಣಿ: ‘ಆಪರೇಷನ್‌’ ಕೃತ್ಯಗಳಿಗೆ ಪಾಠವಾಗಲಿ

​ಪ್ರಜಾವಾಣಿ ವಾರ್ತೆ
Published 6 ಮೇ 2021, 19:30 IST
Last Updated 6 ಮೇ 2021, 19:30 IST

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ
ಎಚ್.ವಿಶ್ವನಾಥ್ ಅವರು ಪಕ್ಷವಿರೋಧಿ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಲಿ, ಇಲ್ಲವಾದರೆ ಪಕ್ಷವನ್ನು ಬಿಡಲಿ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ಹೇಳಿರುವುದು ವರದಿಯಾಗಿದೆ (ಪ್ರ.ವಾ., ಮೇ 6).

ಎಚ್.ವಿಶ್ವನಾಥ್ ಅವರು ಹೇಳುತ್ತಿರುವುದರಲ್ಲಿ ನಿಜವೇ ಇದ್ದರೆ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಸರಿಪಡಿಸಿ ಜನರಿಗೆ ಉತ್ತಮ ಆಡಳಿತ ನೀಡಲಿ ಅಥವಾ ಅವರು ಹೇಳಿದ್ದರಲ್ಲಿ ತಪ್ಪಿದ್ದರೆ ಆಡಳಿತಾರೂಢ ಪಕ್ಷವು ಅವರ ವಿರುದ್ಧವೇ ಕ್ರಮ ಕೈಗೊಳ್ಳಲಿ. ಪಕ್ಷವಿರೋಧಿ ಹೇಳಿಕೆ ನೀಡುತ್ತಿದ್ದು ಪಕ್ಷಕ್ಕೆ ಮುಜುಗರ ಆಗುತ್ತಿದ್ದರೆ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಕೈತೊಳೆದುಕೊಳ್ಳಲಿ.

ಎಚ್.ವಿಶ್ವನಾಥ್ ಅವರು ಈ ಹಿಂದೆ ಇದ್ದ ಎರಡು ಪಕ್ಷಗಳಲ್ಲೂ ಇದೇ ರೀತಿ ವರ್ತಿಸಿದ್ದರು. ಅದನ್ನು ನೋಡಿಯೂ ಬಿಜೆಪಿ ಕೇವಲ ಅಧಿಕಾರದಾಹದಿಂದ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಈಗ ಮುಜುಗರ ಅನುಭವಿಸುವಂತಾಗಿದೆ. ಕೇವಲ ಅಧಿಕಾರಕ್ಕಾಗಿ ಆಪರೇಷನ್ ಕಮಲ, ಆಪರೇಷನ್ ಹಸ್ತದಂತಹ ಕೃತ್ಯಗಳಿಗೆ ಮುಂದಾಗುವ ಪಕ್ಷಗಳಿಗೆ ಇದೊಂದು ಪಾಠವಾಗಲಿ.

ADVERTISEMENT

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.