ADVERTISEMENT

ವಾಚಕರ ವಾಣಿ: ...ದೊರಕದೆ ಹೋದಾನೇ?

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 22:15 IST
Last Updated 1 ನವೆಂಬರ್ 2021, 22:15 IST

ಪುನೀತ್ ರಾಜ್‌ಕುಮಾರ್‌ ಅವರು ನಿಧನರಾದ ಸುದ್ದಿ ಕೇಳಿ ಅವರ ಅಭಿಮಾನಿಗಳು ಒಂದಿಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಾಗ, ಕುವೆಂಪು ಅವರ ಈ ಸಾಲುಗಳು ನೆನಪಾದವು– ‘ಶೋಕವಿರುವುದು ಪ್ರದರ್ಶನ ಕ್ಕಾಗಿಯೇ? ಆತನಿಗೆ ಸಂತೋಷವಾಗುವ ರೀತಿಯಲ್ಲಿ ಬಾಳಿದರೆ ಆತನು ನಮಗೆ ದೊರಕದೆ ಹೋದಾನೇ?’ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಆತ್ಮಹತ್ಯೆಯೊಂದೇ ಮಾರ್ಗವೇ?

ಹಾಗೆ ನೋಡಿದರೆ ಪುನೀತ್ ಈ ಸಮಾಜದ ಬಗೆಗೆ ಅತ್ಯಂತ ಕಾಳಜಿಯನ್ನು ಹೊಂದಿದ್ದ ವ್ಯಕ್ತಿ. ನಿಜವಾಗಿಯೂ ಅವರ ಮೇಲಿನ ಅಭಿಮಾನವನ್ನು ಅವರ ಅಭಿಮಾನಿಗಳು ಸಮಾಜಕ್ಕೆ ನಾಲ್ಕು ಒಳ್ಳೆ ಕೆಲಸಗಳನ್ನು ಮಾಡುವುದರ ಮೂಲಕ ಇನ್ನೂ ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಬಹುದಿತ್ತು. ಇದು ಪುನೀತ್ ಅವರ ಆತ್ಮಕ್ಕೆ ಸಂತೋಷ ತರುವಂತಹ ಕೆಲಸ. ಕುವೆಂಪು ಅವರು ಹೇಳಿದ ರೀತಿ ನಡೆದುಕೊಂಡು ತಮ್ಮ ನೆಚ್ಚಿನ ನಟನಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು.

ಈರಣ್ಣ ಎನ್.ವಿ.,ಶಿರಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.