ADVERTISEMENT

ವಾಚಕರ ವಾಣಿ: ಜನೋಪಯೋಗಿ ಕಾರ್ಯ ಮುಂದುವರಿಯಲಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 22:30 IST
Last Updated 1 ನವೆಂಬರ್ 2021, 22:30 IST

ಪುನೀತ್ ರಾಜ್‌ಕುಮಾರ್ ಬಾಲ್ಯದಿಂದ ನಟನೆಯಲ್ಲಿ ತೊಡಗಿ ನಾಯಕ ನಟನಾಗಿ ಬೆಳೆದ ಅಪರೂಪದ ನಟ. ನಟನೆಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿ ವೃದ್ಧಾಶ್ರಮ, ಅನಾಥಾಲಯ, ಗೋಶಾಲೆ, ಶಿಕ್ಷಣದ ಕೆಲಸಗಳಲ್ಲಿ ಅವರು ತೊಡಗಿದ್ದ ಸುದ್ದಿ ಅವರ ನಿಧನದ ನಂತರ ಬಿತ್ತರಗೊಳ್ಳುತ್ತಿದೆ. ಯಾವುದೇ ಪ್ರಚಾರ ಇಲ್ಲದೆ ಅವರು ಮಾಡಿರುವ ಇಂಥ ಸಮಾಜಮುಖಿ ಕೆಲಸ ಮಾದರಿಯದಾಗಿದೆ.

ಪುನೀತ್‌ ನಿಧನದಿಂದ, ಚಿತ್ರರಂಗದ ಜೊತೆಗೆ ಅವರು ಕೈಗೊಂಡಿದ್ದ ಸಮಾಜಮುಖಿ ಕಾರ್ಯಗಳಿಗೂ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳು ಪುನೀತ್ ಅವರು ಪ್ರಾರಂಭಿಸಿದ ಜನೋಪಯೋಗಿ ಕೆಲಸಗಳನ್ನು ಮುಂದುವರಿಸುವ ಮೂಲಕ ಅವರ ಹೆಸರನ್ನು ಅಜರಾಮರ ಆಗಿಸಬೇಕಿದೆ.

-ಈ.ಬಸವರಾಜು,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.