ಒನಕೆ ಓಬವ್ವ ಜಯಂತಿಗೆ ಸರ್ಕಾರ ಆದೇಶಿಸಿರುವುದು (ಪ್ರ.ವಾ., ನ. 10) ಸ್ವಾಗತಾರ್ಹ. ಚಿತ್ರದುರ್ಗದ ಇತಿಹಾಸದಲ್ಲಿ ಈ ಮಹಾತಾಯಿಯ ಹೆಸರು ಅಜರಾಮರ. ಕನ್ನಡ ನಾಡಿನ ನೂರಾರು ವೀರಾಗ್ರಣಿಯರಲ್ಲಿ ನಮ್ಮ ಓಬವ್ವ ಕೂಡಾ ಸೇರಿದ್ದಾರೆ. ಆದರೆ ಯಾವುದೇ ಜಯಂತಿಗೆ ರಜೆ ನೀಡದೇ ಆಯಾ ಸಾಧಕರ ಮಹತ್ವದ ಬಗ್ಗೆ ಶಾಲಾ ಮಕ್ಕಳಾದಿಯಾಗಿ ಸಾರ್ವಜನಿಕರೂ ಅರ್ಥೈಸಿಕೊಂಡಾಗ ಆ ಜಯಂತಿ ಸಾರ್ಥಕ.
- ಸಂತೆಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.