ADVERTISEMENT

ವಾಚಕರವಾಣಿ: ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ಜಿಲ್ಲೆ ಸಾಧಕರ ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:30 IST
Last Updated 10 ನವೆಂಬರ್ 2021, 19:30 IST

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿ ಕೊಡಮಾಡುತ್ತಿದೆ. ಆದರೆ, ಈ ಬಾರಿ ಕರಾವಳಿ ಭಾಗದ ಜಿಲ್ಲೆಗಳ ಯಕ್ಷಗಾನ ಸಾಧಕರನ್ನು ಕಡೆಗಣಿಸಲಾಗಿದೆ. ಇದು ಸರಿಯಲ್ಲ. ಯಕ್ಷಗಾನ ಕಲೆಯನ್ನು ಹುಟ್ಟುಹಾಕಿದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿಯಕ್ಷಗಾನ ವಿದ್ವಾಂಸರು, ಪ್ರಸಂಗ ಕರ್ತೃಗಳು ಹಲವಾರು ಮಂದಿ ಇದ್ದಾರೆ. ಇಷ್ಟೆಲ್ಲ ಸಾಧಕರಿದ್ದರೂ ಯಾರ ಸಾಧನೆಯನ್ನೂ ಪರಿಗಣನೆಗೆ ತೆಗೆದುಕೊಳ್ಳದಿರುವುದು ನೋವಿನ ಸಂಗತಿ.

ಕರಾವಳಿ ಜಿಲ್ಲೆಗಳ ಶಾಸಕರು, ಸಚಿವರು ಯಕ್ಷಕಲಾ ಆರಾಧಕರು, ಅಭಿಮಾನಿಗಳು. ಮುಂದಿನ ವರ್ಷವಾದರೂ ಯಕ್ಷಸಾಧಕರನ್ನು ಗುರುತಿಸುವ ಜವಾಬ್ದಾರಿ ಇಲ್ಲಿನ ಜನಪ್ರತಿನಿಧಿಗಳ ಮೇಲಿದೆ.

- ಸಾಲಿಗ್ರಾಮ ಗಣೇಶ್‍ ಶೆಣೈ,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.