ADVERTISEMENT

ಪದಚ್ಯುತಗೊಳಿಸುವ ಹಕ್ಕು ಕೊಡಿ

​ಪ್ರಜಾವಾಣಿ ವಾರ್ತೆ
Published 12 ಮೇ 2019, 16:50 IST
Last Updated 12 ಮೇ 2019, 16:50 IST

ಅಪರಾಧ ಹಿನ್ನೆಲೆಯ ಸಂಸದೆಯೊಬ್ಬರನ್ನು ಮತದಾರರೇ ಅಧಿಕಾರದಿಂದ ಕೆಳಗಿಳಿಸಿರುವ ಪ್ರಕರಣ ಇಂಗ್ಲೆಂಡ್‌ನಿಂದ ವರದಿಯಾಗಿದೆ (ಪ್ರ.ವಾ., ಮೇ 3). ಸರ್ಕಾರದ ಕಾರ್ಯದಕ್ಷತೆ ಹೆಚ್ಚಿಸಲು ಇಂತಹ ದಿಟ್ಟ ಕ್ರಮಗಳು ಅತ್ಯಗತ್ಯ.

ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಸುಮಾರು ಶೇ 50ರಷ್ಟು ಮಂದಿ ಅಪರಾಧ ಹಿನ್ನೆಲೆಯುಳ್ಳವರು ಎಂದು ಅಂಕಿ-ಅಂಶಗಳು ತಿಳಿಸುತ್ತವೆ.

ಇಂತಹವರಿಂದ ಎಂತಹ ಆಡಳಿತ ನಿರೀಕ್ಷಿಸಲು ಸಾಧ್ಯ? ಪ್ರಪಂಚಕ್ಕೇ ಮಾದರಿಯಾಗಿರುವ ಭಾರತದ ಸಂವಿಧಾನದಲ್ಲಿ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಧಿಯೊಂದನ್ನು ಸೇರಿಸಿದರೆ, ರಾಜಕಾರಣದಲ್ಲಿ ಅಪರಾಧಿಗಳ ಸಂಖ್ಯೆ ಕಡಿಮೆಯಾದೀತು.

ADVERTISEMENT

‘ಐದು ವರ್ಷ ನನ್ನನ್ನು ಕೇಳುವವರು ಯಾರೂ ಇಲ್ಲ’ ಎಂದು ತಿಳಿದು ಉದ್ಧಟತನ ತೋರುವ ಜನಪ್ರತಿನಿಧಿಗಳು ಇಂಥ ನಿಷ್ಠುರ ಕ್ರಮಗಳಿಂದ ಸರಿದಾರಿಗೆ ಬಂದಾರು.

ಆನಂದ ಎನ್.ಎಲ್.,ಅಜ್ಜಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.