ADVERTISEMENT

ಆಂದೋಲನ ಒಳ್ಳೆಯ ಬೆಳವಣಿಗೆ

ಹೊಣೆಗೇಡಿ ಜನಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 17:42 IST
Last Updated 22 ಜನವರಿ 2019, 17:42 IST

ಆಂದೋಲನ ಒಳ್ಳೆಯ ಬೆಳವಣಿಗೆ

ಮದ್ಯಪಾನದ ವಿರುದ್ಧ ಮಹಿಳೆಯರು ಸಂಘಟಿತರಾಗಿ ಆಂದೋಲನ ನಡೆಸುತ್ತಿರುವುದು ಉತ್ತಮ ಕಾರ್ಯ. ಕೆಲವು ಮಠಾಧೀಶರೂ ಇದಕ್ಕೆ ಬೆಂಬಲ ಸೂಚಿಸುತ್ತಿರುವುದು ಮತ್ತೂ ಒಳ್ಳೆಯ ಬೆಳವಣಿಗೆ. ಈ ಆಂದೋಲನದಲ್ಲಿ ನಾಡಿನ ಎಲ್ಲ ಮಠಾಧೀಶರೂ ಸಕ್ರಿಯವಾಗಿ ಭಾಗವಹಿಸಿ, ಮದ್ಯಪಾನ ನಿಷೇಧವಷ್ಟೇ ಅಲ್ಲ ಮದ್ಯ ತಯಾರಿಕೆಯನ್ನೇ ನಿಷೇಧಿಸಲು ಆಗ್ರಹಿಸಬೇಕು.

ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ADVERTISEMENT

***

ಹೊಣೆಗೇಡಿ ಜನಪ್ರತಿನಿಧಿಗಳು

ದಕ್ಷ ಆಡಳಿತವೂ ಇಲ್ಲದ, ಸಮರ್ಥ ವಿರೋಧ ಪಕ್ಷವೂ ಇಲ್ಲದಂತಹ ಸ್ಥಿತಿ ಇಂದು ರಾಜ್ಯದಲ್ಲಿದೆ.ಕ್ಷೇತ್ರದ ಜನರ ಸೇವೆ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿ ವಿಧಾನಸಭೆ ಪ್ರವೇಶಿಸಿದ ಈ ಮಂದಿ, ಅಧಿಕಾರಕ್ಕಾಗಿ ಜನರ ಹಿತ ಮರೆತು ವರ್ತಿಸುತ್ತಿರುವುದು
ದುರದೃಷ್ಟಕರ. ಈ ಹೊಣೆಗೇಡಿ ಜನಪ್ರತಿನಿಧಿಗಳು ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಯಾವ ನ್ಯಾಯ?

ನಮ್ಮ ನ್ಯಾಯಾಂಗ ಮತ್ತು ಚುನಾವಣಾ ಆಯೋಗ ಈಗಲಾದರೂ ಮಧ್ಯ ಪ‍್ರವೇಶಿಸಿ, ಶಾಸಕರ ಅನೈತಿಕ ವರ್ತನೆಗೆ ಕಡಿವಾಣ ಹಾಕಬೇಕು. ಇಂತಹವರು ಮುಂದೆ ಅಂತಹ ಸ್ಥಾನಕ್ಕೆ ಬರದಂತೆ ಆಗಬೇಕು. ಇದು ಕಾರ್ಯರೂಪಕ್ಕೆ ಬರಬೇಕಾದರೆ, ನಾಗರಿಕರು ಮತ ಹಾಕುವ ಮುನ್ನ ನೂರು ಬಾರಿ ಯೋಚಿಸುವಂತಾಗಬೇಕು.

ಸೂದನ ಎಸ್., ಪಾಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.