ADVERTISEMENT

ಭೂಪಟಕ್ಕೆ ‘ಸರಪಳಿ’ ಏಕೆ?

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 20:41 IST
Last Updated 4 ಜೂನ್ 2020, 20:41 IST

ಕೆಲವು ಟಿ.ವಿ ವಾಹಿನಿಗಳ ಸುದ್ದಿ ಪ್ರಸಾರದ ಸಮಯದಲ್ಲಿ ತೆರೆಯ ಮೇಲೆ ಭಾರತದ ಭೂಪಟಕ್ಕೆ ಸರಪಳಿಯ ಜೊತೆಗೆ ಬೀಗ ಇರುವಂತಹ ಚಿತ್ರ ಹಾಕಲಾಗಿರುತ್ತದೆ. ಭೂಪಟವು ದೇಶಭಕ್ತಿಯ ಸಂಕೇತ. ಸರಪಳಿಗೆ ಬೀಗದ ಪದಕ ಹಾಕಿದ ಭೂಪಟವನ್ನು ನೋಡಲು ಮನಸ್ಸು ಒಪ್ಪುವುದಿಲ್ಲ. ಲಾಕ್‌ಡೌನ್‌ ಪದವು ಈ ಮೂರು ತಿಂಗಳಲ್ಲಿ ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ, ಅದನ್ನು ಬಿಂಬಿಸುವ ಇಂತಹ ಚಿತ್ರಸಹಿತ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಲಿ.

–ಸುಜಾತಾ ಎಂ.ಎಚ್‌., ಹುಲ್ಲತ್ತಿ, ಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT