ADVERTISEMENT

ವೈದ್ಯಕೀಯ ಪ್ರಮಾಣಪತ್ರ: ನಿರ್ಲಕ್ಷ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:31 IST
Last Updated 9 ಏಪ್ರಿಲ್ 2021, 19:31 IST

ಕೊರೊನಾ ಎರಡನೇ ಅಲೆಯ ಬಗ್ಗೆ ರಾಜ್ಯ ಸರ್ಕಾರವು ನಿರ್ಲಕ್ಷ್ಯ ತಾಳಿದಂತಿದೆ. ಅದಕ್ಕೆ ನಿದರ್ಶನವೆಂಬಂತೆ, ನಮ್ಮ ಕುಟುಂಬದ ಅನುಭವವೊಂದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಾನು ಬೆಂಗಳೂರಿನಲ್ಲಿ ವಾಸವಾಗಿರುವ ಗೃಹಿಣಿ. ನನ್ನ ಮಗ ಜಿ.ಶ್ರೀಧರ ತಾನು ಕೆಲಸ ಮಾಡುತ್ತಿರುವ ಕಂಪನಿಯ ಮೀಟಿಂಗ್‌ಗೆಂದು ಸೋಮವಾರ ದೆಹಲಿಗೆ ವಿಮಾನದಲ್ಲಿ ತುರ್ತು ಪ್ರಯಾಣ ಬೆಳೆಸಿದ್ದ. ಮತ್ತೆ ಗುರುವಾರದಂದು ಸರ್ಕಾರದ ನಿಯಮದಂತೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಪ್ರಮಾಣಪತ್ರದೊಂದಿಗೆ ಬೆಂಗಳೂರಿಗೆ ವಾಪಸಾದ. ಆದರೆ ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಯಾರೊಬ್ಬರೂ ಕೊರೊನಾ ಪರೀಕ್ಷೆ ಬಗ್ಗೆ ಆತನನ್ನು ವಿಚಾರಿಸಲಿಲ್ಲವಂತೆ.

ಇದು ಹೀಗೇ ಮುಂದುವರಿದರೆ ಕೊರೊನಾವನ್ನು ನಿಯಂತ್ರಿಸಲು ಹೇಗೆ ಸಾಧ್ಯ? ಪ್ರತಿನಿತ್ಯ ವಿಮಾನಗಳಲ್ಲಿ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಹೀಗಾಗಿ ಈ ವಿಷಯವನ್ನು ಅತಿ ಗಂಭೀರವಾಗಿ ಪರಿಗಣಿಸದೆ ಸಂಬಂಧಪಟ್ಟವರು ನಿರ್ಲಕ್ಷ್ಯ ತಾಳಿರುವುದು ಅಚ್ಚರಿಯೇ ಸರಿ. ದೇಶದಾದ್ಯಂತ ದಿನೇ ದಿನೇ ಹೆಚ್ಚಾಗುತ್ತಲೇ ಇರುವ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಬೇಕಾದರೆ ದೇಶ–ವಿದೇಶಗಳಿಂದ ವಿಮಾನದಲ್ಲಿ ಬರುವವರನ್ನು ಮೊದಲು ಪರೀಕ್ಷೆಗೆ ಒಳಪಡಿಸಿ, ಅವರ ವೈದ್ಯಕೀಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಆಗ ಮಾತ್ರ ಮುಂದಾಗಬಹುದಾದ ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಸಾಧ್ಯ.

–ಜಯಮ್ಮ ಗೋಪಾಲಕೃಷ್ಣ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.