ADVERTISEMENT

ವಾಚಕರ ವಾಣಿ | ಜನಕಲ್ಯಾಣದ ಸದುದ್ದೇಶ ಇಲ್ಲದಿದ್ದರೆ...

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 19:30 IST
Last Updated 2 ಆಗಸ್ಟ್ 2020, 19:30 IST
ಮತದಾನದ ಹಕ್ಕು–ಪ್ರಾತಿನಿಧಿಕ ಚಿತ್ರ
ಮತದಾನದ ಹಕ್ಕು–ಪ್ರಾತಿನಿಧಿಕ ಚಿತ್ರ   

ಶಾಸಕರು ಮತ್ತು ಸಂಸದರಿಗೆ ಸಂವಿಧಾನದತ್ತವಾಗಿ ನೀಡಿರುವ ರಾಜೀನಾಮೆಯ ಹಕ್ಕನ್ನು ಮೊಟಕುಗೊಳಿಸದೆ, ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬುದನ್ನು ವಿಧಾನಸಭೆ ಹಾಗೂ ಲೋಕಸಭೆ ಮನಗಾಣಬೇಕು. ರಾಷ್ಟ್ರ, ರಾಜ್ಯ, ಭಾಷೆ, ಸಮುದಾಯದ ಹಿತಕ್ಕಾಗಿ ಅಥವಾ ಜನಕಲ್ಯಾಣದ ದೃಷ್ಟಿಯಿಂದ ಕೊಟ್ಟಿದ್ದರೆ ಮಾತ್ರ ಆ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು. ಆಗ ಇಂತಹ ಸದುದ್ದೇಶದ ಕುರುಹಾಗಿ ವಿಧಾನಸಭೆ ಹಾಗೂ ಸಂಸತ್ತಿನ ಪ್ರಾಂಗಣದಲ್ಲಿ ಇಂತಹ ಜನಪ್ರತಿನಿಧಿಗಳ ಭಾವಚಿತ್ರ ಅನಾವರಣ ಮಾಡಬೇಕು.

ಈ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ರಾಜೀನಾಮೆ ನೀಡಿದ ವ್ಯಕ್ತಿ ಹಾಗೂ ಅವರ ಕುಟುಂಬದ ಸದಸ್ಯರು, ಸಂಬಂಧಿಕರು
ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರಬೇಕು. ಆಗ, ಜನಹಿತ ಮರೆತು ಸ್ವಹಿತಾಸಕ್ತಿಗಷ್ಟೇ ಆದ್ಯತೆ ನೀಡುವ ಶಾಸಕರು ಹಾಗೂ ಸಂಸದರು ರಾಜೀನಾಮೆ ಪ್ರಹಸನಕ್ಕೆ ಸ್ವತಃ ತೆರೆ ಎಳೆಯುತ್ತಾರೆ.

–ಎಂ.ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.