ADVERTISEMENT

ಮೊಬೈಲ್ ಹಾವಳಿ: ಬೇಕು ಸೂಚನಾ ಫಲಕ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:45 IST
Last Updated 4 ನವೆಂಬರ್ 2022, 19:45 IST

ಇತ್ತೀಚಿನ ದಿನಗಳಲ್ಲಿ ಯಾವುದೇ ಬಸ್ಸು ಹತ್ತಿದರೆ ಸಾಕು, ಅಬ್ಬರದ ಹಾಡು ಅಥವಾ ವಿಕಟ ನಗೆ, ಜೋರು ಮಾತುಗಳು ಮೊಬೈಲ್‍ನಿಂದ ಕೇಳಿಬರುತ್ತಿರುತ್ತವೆ. ಇದರಿಂದ ಸಹಪ್ರಯಾಣಿಕರಿಗೆ ಕಿರಿಕಿರಿ ಆಗುತ್ತದೆ ಎಂಬ ಕನಿಷ್ಠ ಅರಿವೂ ಇಲ್ಲದವರಿಗೆ ಹೇಗೆ ತಿಳಿಹೇಳುವುದು? ಹಾಗಾಗಿ ಬಸ್‍ಗಳಲ್ಲಿ ಮೊಬೈಲ್ ಸದ್ದಿನ ಕಿರಿಕಿರಿ ನಿಯಂತ್ರಿಸುವ ಕುರಿತು ಸೂಚನಾ ಫಲಕ ಅಳವಡಿಸುವ ಕಾರ್ಯವಾಗಬೇಕು. ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಫೋನ್‌ ಬಳಸುವುದನ್ನು ಕಲಿಸುವ ಕೆಲಸ ಆಗಬೇಕು.

-ಡಾ. ಹನುಮಂತ ಪೂಜಾರ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT