ADVERTISEMENT

ವಾಚಕರ ವಾಣಿ| ಬೈಡನ್ ನಿವಾಸದಲ್ಲಿ ಶೋಧ ನಡೆಸಿದ ಎಫ್‌ಬಿಐ ಮಾದರಿ ನಡೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 17:07 IST
Last Updated 24 ಜನವರಿ 2023, 17:07 IST
   

ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆಯಾದ ಎಫ್‌ಬಿಐ (ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್) ದೇಶದ ಅಧ್ಯಕ್ಷ ಜೋ ಬೈಡನ್ ಅವರ ನಿವಾಸದಲ್ಲಿ ಶೋಧ ನಡೆಸಿ, ಸುಮಾರು 20 ಮಹತ್ವದ ವರ್ಗೀಕೃತ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ ಎಂಬ ವರದಿಯನ್ನು ಓದಿ ಆಶ್ಚರ್ಯದ ಜೊತೆಗೆ ತುಂಬಾ ಸಂತೋಷ ಕೂಡ ಆಯಿತು. ಬೈಡನ್ ಅವರು 2009ರಿಂದ 2016ರವರೆಗೆ ದೇಶದ ಉಪಾಧ್ಯಕ್ಷರಾಗಿದ್ದವರು. ಈ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳಿಗೆ ಸಂಬಂಧಪಟ್ಟ ಹಾಗೆ ಈ ಶೋಧ ನಡೆದಿದೆ ಎಂದು ಹೇಳಲಾಗುತ್ತಿದೆ. ಅದರ ಸತ್ಯಾಸತ್ಯತೆ ಏನೇ ಇರಲಿ ಅದು ನಮಗೆ ಮುಖ್ಯವಲ್ಲ. ಆದರೆ ಜಗತ್ತಿನ ಅತ್ಯಂತ ಪ್ರಭಾವಶಾಲಿ ಹುದ್ದೆಯಲ್ಲಿರುವ ಅಮೆರಿಕದ ಅಧ್ಯಕ್ಷರ ವಿರುದ್ಧವೇ ಅದೇ ದೇಶದ ತನಿಖಾ ಸಂಸ್ಥೆಯು ತನಿಖೆ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿರುವುದು ನಿಜಕ್ಕೂ ಐತಿಹಾಸಿಕವಾದುದು. ನಮ್ಮ ದೇಶದ ಸಿಬಿಐ ಸೇರಿದಂತೆ, ವಿಶ್ವದ ಎಲ್ಲ ತನಿಖಾ ಸಂಸ್ಥೆಗಳಿಗೂ ಇದು ಮಾದರಿ ನಡೆಯಾಗಿದೆ. ಅಲ್ಲದೆ ಇದು ಆ ಸಂಸ್ಥೆಯ ವಿಶ್ವಾಸಾರ್ಹತೆಗೆ ಹಿಡಿದ ಕನ್ನಡಿಯಾಗಬಲ್ಲದು.

- ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT