ADVERTISEMENT

ವಾಚಕರ ವಾಣಿ: ಕಾಂಗ್ರೆಸ್‌ನವರು ಪ್ರಶ್ನಿಸಬೇಕಿರುವುದು...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಮೇ 2022, 19:45 IST
Last Updated 16 ಮೇ 2022, 19:45 IST

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತಾಯಿಯ ಬ್ಯಾಂಕ್ ಖಾತೆಗೆ ಸರ್ಕಾರದ ಯಾವ ಯೋಜನೆ ಅಡಿ ₹ 1 ಲಕ್ಷ ಜಮಾ ಆಗಿದೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕಾಂಗ್ರೆಸ್ಸಿಗರೇ, ಪ್ರಧಾನಿಯವರ ವಾಗ್ದಾನ ಮರೆತಿರಾ?! ‘ದೇಶವಾಸಿಗಳಾದ ಪ್ರತೀ ನಾಗರಿಕರ ಖಾತೆಗೆ ₹ 15 ಲಕ್ಷ ಜಮಾ!’ ಎಂದು ಈ ಹಿಂದೆ ಅವರು ಹೇಳಿದ್ದು, ಅದರ ಬಾಬ್ತು ಚಾಲನೆಯ ಮೊದಲ ಕಂತಾಗಿ ಕಟೀಲ್‌ ಅವರ ತಾಯಿಯ ಬ್ಯಾಂಕ್ ಖಾತೆಗೆ ₹ 1 ಲಕ್ಷ ಜಮಾ ಆಗಿರಬಹುದು!

ಕಾಂಗ್ರೆಸ್ಸಿಗರು ಅದನ್ನೇ ಪ್ರಶ್ನೆ ಮಾಡುವುದಲ್ಲ. ‘ಉಳಿದ ₹ 14 ಲಕ್ಷ ಯಾವಾಗ ಜಮಾ ಮಾಡುವಿರಿ?’ ಎಂದು ಪ್ರಶ್ನಿಸಲಿ!

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.