ಹುಲಿಗಳಿಗೆ ‘ನರಭಕ್ಷಕ’ ಎನ್ನುವಂತಿಲ್ಲ, ಅದರ ಬದಲು ‘ಮಾನವನ ಜೀವಕ್ಕೆ ಅಪಾಯಕಾರಿ’ ಎನ್ನಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೇಳಿರುವುದು (ಪ್ರ.ವಾ., ನ. 15) ಸ್ವಾಗತಾರ್ಹ.
ಪ್ರಸ್ತುತ ಅಳಿವಿನ ಅಂಚಿನಲ್ಲಿರುವ ಹುಲಿಗಳು ತಾವಾಗೇ ಮನುಷ್ಯರ ಮೇಲೆರಗಿ ದಾಳಿ ಮಾಡಿ ಭಕ್ಷಿಸುವುದು ತೀರಾ ಕಡಿಮೆ. ಅವುಗಳಿಗೆ ಅಪಾಯ ಬಂದೆರಗಿದಾಗ ಮಾತ್ರ ದಾಳಿ ಮಾಡುತ್ತವೆ. ಹಸಿವಾದಾಗಷ್ಟೇ ಬೇರೆ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಆದರೆ ಸರ್ವ ಪ್ರಾಣಿ-ಪಕ್ಷಿಗಳನ್ನೂ ಬೇಟೆಯಾಡಿ, ನಿಸರ್ಗ ಸಂಪತ್ತನ್ನು ಲೂಟಿ ಮಾಡಿ ತಿಂದು ತೇಗುವ ಮಾನವ ಮೃಗವನ್ನು ಏನೆಂದು ಕರೆಯಬೇಕು?
-ಮಹಾಂತೇಶ್ ಬಿ. ನಿಟ್ಟೂರ್, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.