ಕೋವಿಡ್ ಅಥವಾ ಇನ್ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮಂದಿಗೆ ತಲುಪಿಸಲು ಆಡಳಿತಾ ರೂಢರು ಆಗಾಗ ಸುತ್ತೋಲೆಗಳನ್ನು ಹೊರಡಿಸುತ್ತಾರೆ. ಆದರೆ ಅವೆಲ್ಲವೂ ಮಂದಿಗೆ ತಲುಪಿಸುವ ಸಲುವಾಗಿ ಹೊರಡಿಸುವ ಸುತ್ತೋಲೆಗಳಾದರೆ ಅವು ಮಂದಿಯ ನುಡಿಯಲ್ಲಿ ಇರುವುದೇ ಸರಿ, ಅಲ್ಲವೇ? ಆದರೆ, ಅವು ಬಹುತೇಕ ಇಂಗ್ಲಿಷ್‌ನಲ್ಲಿಯೇ ಇರುತ್ತವೆ. ಆಡಳಿತದಲ್ಲಿ ಕನ್ನಡ ಇರಬೇಕೆಂದು ಹಲವು ಸಲ ಸಾರಿದರೂ ಅಂತಹ ಮಾತುಗಳಿಗೆ ಯಾವ ಬೆಲೆಯೂ ಇಲ್ಲ ಎನಿಸುತ್ತದೆ. ನವೆಂಬರ್‌ನಲ್ಲಷ್ಟೇ ನಾಡುನುಡಿ ನೆನೆದರೆ ಸಾಲದು, ಇಡೀ ವರ್ಷ ಕನ್ನಡದ ಕುರಿತು ಕಳಕಳಿ ಕಾಣಬೇಕು. ಇಲ್ಲದಿದ್ದರೆ ಸರ್ಕಾರದ ಮಾತು, ನಡೆಗಳಿಗೆ ಬೆಲೆ ದೊರೆಯುವುದಿಲ್ಲ.
- ವಿವೇಕ್ ಶಂಕರ್,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.