ADVERTISEMENT

ವಿದೇಶಿ ತಂತ್ರಜ್ಞಾನ ಬೇಕೇ?

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:45 IST
Last Updated 9 ಡಿಸೆಂಬರ್ 2018, 20:45 IST

ಬೆಂಗಳೂರು ಮಹಾನಗರ ಪಾಲಿಕೆಯವರು ಕಸದಿಂದ ವಿದ್ಯುತ್ ತಯಾರಿಸಲು ವಿದೇಶಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ವರದಿಯಾಗಿದೆ.

ಒಪ್ಪಂದದಂತೆ, ಪಾಲಿಕೆಯವರು ವಿದೇಶಿ ಕಂಪನಿಗೆ ಕಸವನ್ನು ಉಚಿತವಾಗಿ ಪೂರೈಸಬೇಕು. ಆ ಕಂಪನಿಯು ಕಸವನ್ನು ಸುಟ್ಟು, ವಿದ್ಯುತ್ ತಯಾರಿಸಿ ಕೆಪಿಟಿಸಿಎಲ್‌ಗೆ ಮಾರಾಟ ಮಾಡಬೇಕು. ಈ ರೀತಿಯಾಗಿ ವಿದ್ಯುತ್ ಉತ್ಪಾದಿಸುವುದು ಪವಾಡವೇನೂ ಅಲ್ಲ. ನಮ್ಮ ರಾಜ್ಯದ ವಿಜ್ಞಾನ ಪರಿಷತ್ತು ನಡೆಸುವ ಪ್ರದರ್ಶನಗಳಲ್ಲಿ ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳೇ ಈ ಕುರಿತ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸುತ್ತಾರೆ.

ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ನಮ್ಮ ರಾಜ್ಯದ ಎಂಜಿನಿಯರ್‌ಗಳು ಕಸದಿಂದ ವಿದ್ಯುತ್ ತಯಾರಿಸಲಾಗದಷ್ಟು ದಡ್ಡರೇನಲ್ಲ. ವಸ್ತುಸ್ಥಿತಿ ಹೀಗಿರುವಾಗ ಸಣ್ಣಪುಟ್ಟ ಕೆಲಸಗಳಿಗೂ ನಾವು ವಿದೇಶಿ ಕಂಪನಿಗಳಿಗೆ ನಮ್ಮ ಹಣ ಮತ್ತು ಬೆಲೆ ಬಾಳುವ ಭೂಮಿಯನ್ನು ಕೊಟ್ಟು ರತ್ನಗಂಬಳಿ ಹಾಸಿ ಸ್ವಾಗತಿಸಿದರೆ, ಸ್ವದೇಶಿ ಕಂಪನಿಗಳು ಮತ್ತು ನಮ್ಮ ತಂತ್ರಜ್ಞಾನ ಏನಾಗಬೇಕು?

ADVERTISEMENT

ಗಣಪತಿ ಎಂ. ನಾಯ್ಕ, ಕಾನಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.