ADVERTISEMENT

ಉಳ್ಳವರ ಪಾಲಾಗುತ್ತಿದೆ ಬೆಂಬಲ ಬೆಲೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST

ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರವು 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿತ್ತು. ಇದರಿಂದ ರೈತರು ಖುಷಿಪಟ್ಟಿದ್ದರು. ಆದರೆ ವಾಸ್ತವ ಬೇರೆ. ಹೆಸರು ಬೆಳೆ ಕಟಾವು ಆಗಿದ್ದರೂ ಖರೀದಿ ಕೇಂದ್ರಗಳು ತೆರೆಯಲೇ ಇಲ್ಲ. ಖರೀದಿ ಕೇಂದ್ರಗಳು ಆರಂಭವಾಗುವವರೆಗೂ ಫಸಲನ್ನು ಸಂಗ್ರಹಿಸಿ, ಕಾಯುತ್ತಾ ಕೂರುವಷ್ಟು ಶಕ್ತಿ ಸಣ್ಣ ರೈತರಿಗೆ ಇಲ್ಲದೆ, ಕಟಾವಾದ ಕೂಡಲೇ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಮಾರಿದ್ದಾರೆ.

ಇದಾದಮೇಲೆ ಸರ್ಕಾರಿ ಖರೀದಿ ಕೇಂದ್ರಗಳು ಆರಂಭವಾದವು. ಮತ್ತು ಅವಕ್ಕೆ ತಾಂತ್ರಿಕ ದೋಷದ ತಲೆನೋವು ಬೇರೆ! ಪರಿಣಾಮ, ಬೆಂಬಲ ಬೆಲೆಯು ದೊಡ್ಡ ರೈತರು ಮತ್ತು ವ್ಯಾಪಾರಸ್ಥರ ಪಾಲಾಯಿತು. ಈಗ ಇದೇ ಪರಿಸ್ಥಿತಿ ಮೆಕ್ಕೆಜೋಳಕ್ಕೆ ಬಂದೊದಗಿದೆ. ಖರೀದಿ ಕೇಂದ್ರಗಳು ಎಲ್ಲೂ ಕಾಣಿಸುತ್ತಿಲ್ಲ. ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತೋ ಏನೋ! ಬೇಗ ಕಣ್ಣು ತೆರೆದರೆ ಈ ಯೋಜನೆಯು ಬಡ ರೈತನ ಕೈ ತುತ್ತಿಗಾದರೂ ಆದೀತು...

–ಸುರೇಶ ಕಳಸದ, ಕಡಕೊಳ, ಹಾವೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.