ADVERTISEMENT

ಅಪಾಯಕಾರಿ ಕಳೆನಾಶಕ ನಿಷೇಧಿಸಿ

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ
Published 2 ಏಪ್ರಿಲ್ 2019, 6:59 IST
Last Updated 2 ಏಪ್ರಿಲ್ 2019, 6:59 IST
   

ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ರೌಂಡಪ್’ ಎನ್ನುವ ಕಳೆನಾಶಕದ ದುಷ್ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಸರ್ಕಾರ, ಇದರಿಂದ ಆಗಿರಬಹುದಾದ ಅನಾಹುತಗಳ ಬಗ್ಗೆ ತನಿಖೆಗೆ ಮುಂದಾಗಿರುವುದು ಸ್ವಾಗತಾರ್ಹ.

ಈ ಕಳೆನಾಶಕದಲ್ಲಿಗ್ಲೈಪೋಸೆಟ್ ಎಂಬ ರಾಸಾಯನಿಕವು ಹೆಚ್ಚಿನ ಪ್ರಮಾಣದಲ್ಲಿ ಸಂಯೋಜನೆಗೊಂಡಿದೆ. ಇದರ ಬಳಕೆಯಿಂದ ಮಣ್ಣಿನ‌ ಫಲವತ್ತತೆ ಹಾಗೂ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎಂಬುದರ ಜೊತೆಗೆ, ಇದು ಮನುಷ್ಯನಿಗೂ ರೋಗಕಾರಕವೆಂದು ವಿದೇಶಿ ವರದಿಗಳು ಅಭಿಪ್ರಾಯಪಟ್ಟಿವೆ.

ಗ್ಲೈಪೋಸೆಟ್ ರಾಸಾಯನಿಕ ವಸ್ತುವಿನೊಂದಿಗೆ ಕಳೆನಾಶಕ ತಯಾರು ಮಾಡುವ ಅನೇಕ ಕಂಪನಿಗಳಿವೆ. ಈ ರಾಸಾಯನಿಕ ವಸ್ತುವಿಲ್ಲದೆ ಯಾವುದೇ ಕಳೆನಾಶಕ ತಯಾರಿಸಲು ಸಾಧ್ಯವಿಲ್ಲ ಎನ್ನುವುದಾದರೆ, ಇತರೆ ಬ್ರ್ಯಾಂಡಿನ ಕಳೆನಾಶಕಗಳು ಕೂಡ ಅಷ್ಟೇ ದುಷ್ಪರಿಣಾಮ ಬೀರುತ್ತವೆ ಎಂದಾಯಿತು.

ADVERTISEMENT

ಅನೇಕ ರಾಷ್ಟ್ರಗಳಲ್ಲಿ ಈಗಾಗಲೇ ಇಂತಹ ಅಪಾಯಕಾರಿ ಕಳೆನಾಶಕಗಳನ್ನು ನಿಷೇಧಿಸಿ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವೂ ಕ್ರಮ ಕೈಗೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.