ADVERTISEMENT

ದೈಹಿಕ ಪರೀಕ್ಷೆ: ಅವ್ಯವಸ್ಥೆ ಸರಿಪಡಿಸಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 19:45 IST
Last Updated 27 ಜೂನ್ 2022, 19:45 IST

ಧಾರವಾಡದ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಪೊಲೀಸ್ ದೈಹಿಕ ಪರೀಕ್ಷೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ಸ್ಪರ್ಧಾರ್ಥಿಗಳು ಬಂದು, ಗೇಟ್ ಹೊರಗೆ ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ನಿಲ್ಲುತ್ತಾರೆ. ಬೆಳಿಗ್ಗೆ 3 ಗಂಟೆಗೇ ಬಂದು ಪಾಳಿ ಹಚ್ಚುವುದು ವಾಡಿಕೆ. 7 ಗಂಟೆಗೆ ಬರುವ ಪೊಲೀಸ್ ಸಿಬ್ಬಂದಿ, ಪಾಳಿ ಲೆಕ್ಕಕ್ಕಿಲ್ಲದ ಹಾಗೆ ವರ್ತಿಸಿ, ದೈಹಿಕ ಪರೀಕ್ಷೆಗಾಗಿ ಮನಸೋಇಚ್ಛೆ ಅಭ್ಯರ್ಥಿಗಳನ್ನು ಮೈದಾನಕ್ಕೆ ಬಿಡುತ್ತಾರೆ. ಇಂತಹ ಪದ್ಧತಿ ನಿಲ್ಲಬೇಕು. ದೈಹಿಕ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಕ್ರಮ ಸಂಖ್ಯೆ ಇರುವುದರಿಂದ, ಅದರ ಪ್ರಕಾರ ಅಭ್ಯರ್ಥಿಗಳನ್ನು ಕಳುಹಿಸುವ ಮೂಲಕ ಇಂತಹ ಅವ್ಯವಸ್ಥೆಯನ್ನು ತಪ್ಪಿಸಬೇಕು.

-ಬಸನಗೌಡ ಪಾಟೀಲ,ಯರಗುಪ್ಪಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT