ಶಾಲಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ರಾಜಕಾರಣಿಗಳು ಮೂಗು ತೂರಿಸುವುದರಿಂದ ಮಕ್ಕಳಿಗೆ ಆಗುವ ತೊಂದರೆಯ ಬಗ್ಗೆ ರಾಘವೇಂದ್ರ ಈ. ಹೊರಬೈಲು ಬರೆದ ಲೇಖನ (ಸಂಗತ, ಸೆ. 25) ಓದಿ ಬೇಜಾರಾಯಿತು.
ಸ್ವಪ್ರತಿಷ್ಠೆಯ ಮಹಾಶಯರೇ, ಇದೇನು ರಾಜಪ್ರಭುತ್ವವಲ್ಲ. ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂಬುದು ನೆನಪಿರಲಿ. ಶಾಲಾ ಕಾರ್ಯಕ್ರಮ ಮಕ್ಕಳ ಬೆಳವಣಿಗೆಗೆ ವೇದಿಕೆಯಾಗಬೇಕೇ ಹೊರತು ನಿಮ್ಮಂತಹವರ ಪ್ರತಿಷ್ಠೆಯ ತೋರ್ಪಡಿಕೆಗಲ್ಲ.
-ಗಿರಿದುರ್ಗ,ಸೊನ್ನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.